ಬಿಗ್ ಬಾಸ್ ಬಿಟ್ಟು ಬಂದ ಬಳಿಕ ಮಂಜುಗೆ ಕಾಡುತ್ತಿದೆ ಪಶ್ಚಾತ್ತಾಪ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಮಾಡ್ರನ್ ಮಹಾಕವಿ ಮಂಜ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜನರಿಂದ ಸಿಕ್ಕ ಪ್ರೀತಿ ದೊಡ್ಡ ಪುಣ್ಯ ಎಂದ ಮಂಜ, ಒಂದಿಷ್ಟು ತಾಳ್ಮೆ ಕಳೆದುಕೊಂಡಿದ್ದಕ್ಕೆ ಪಶ್ಚಾತ್ತಾಪಪಟ್ಟಿದ್ದಾರೆ. ಕಿರಣ್ ಅವರೊಂದಿಗಿನ ಭಿನ್ನಾಭಿಪ್ರಾಯ ಹಾಗೂ ಅಹಂಕಾರದ ಆರೋಪಗಳ ಕುರಿತು ಮಂಜ ತಮ್ಮದೇ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮಾಡ್ರನ್ ಮಹಾಕವಿ ಮಂಜ ತಮ್ಮ ಮನೆಯಲ್ಲಿದ್ದ ಅನುಭವಗಳನ್ನು TV9 ಕನ್ನಡ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಗಳಿಸಿದ್ದೇನು ಮತ್ತು ಕಳೆದುಕೊಂಡಿದ್ದೇನು ಎಂಬ ಪ್ರಶ್ನೆಗೆ ಮಂಜ ತಮ್ಮ ನೇರವಾದ ಉತ್ತರ ನೀಡಿದ್ದಾರೆ.
ಜನರಿಂದ ಸಿಕ್ಕಿರುವ ಅಪಾರ ಪ್ರೀತಿಯೇ ತಮಗೆ ಅತಿ ದೊಡ್ಡ ಸಂಪಾದನೆ. ‘ಅಣ್ಣ ಮಂಜಣ್ಣ ಎಂದು ಕರೆಸಿಕೊಳ್ಳುವುದು ಅದೃಷ್ಟ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದು ನನ್ನನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ’ ಎಂದು ಮಂಜ ಹೇಳಿದ್ದಾರೆ.
ಮನೆಯೊಳಗೆ ತಾವು ತಾಳ್ಮೆ ಕಳೆದುಕೊಂಡಿದ್ದು ನಿಜ ಎಂಬುದನ್ನು ಮಂಜ ಒಪ್ಪಿಕೊಂಡಿದ್ದಾರೆ. ‘ಒಂದು ಹಂತಕ್ಕೆ ಲೈಫ್ನಲ್ಲಿ ಏನೋ ಒಂದು ಸಾಧಿಸಬೇಕು ಅನ್ನುವಂತ ಯೋಚನೆಗಳು ಇದ್ದಾಗ, ಕೆಲವು ಹೆಜ್ಜೆಗಳಲ್ಲಿ ಮಾಡುವ ಮಿಸ್ಟೇಕ್ಗಳು ಇಡೀ ಲೈಫ್ನ ಕನಸುಗಳನ್ನೇ ಡೈವರ್ಟ್ ಮಾಡುತ್ತೆ. ಎಂದು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 14, 2026 03:13 PM
Loading...
Unable to load recommendations.
Follow Us
