ವಿಡಿಯೋ: ಬಿಗ್ಬಾಸ್ ಮನೆಯಲ್ಲಿ ಬಿಚ್ಚಿಕೊಂಡ ಬಾಲ್ಯದ ನೆನಪುಗಳು
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಗಳು ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ. ಎಲ್ಲರೂ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಕೆಲವು ಹಾಸ್ಯದ ಹಾಗೂ ಕೆಲವು ಭಾವುಕ ಸನ್ನಿವೇಶಗಳು ಮನೆಯಲ್ಲಿ ಸೃಷ್ಟಿಯಾಗಿವೆ.
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಟಾಸ್ಕ್ಗಳು ಜೋರಾಗಿ ನಡೆಯುತ್ತಿವೆ. ಇದರ ಜೊತೆಗೆ ಆಗಾಗ್ಗೆ ಬಿಗ್ಬಾಸ್ ಕೆಲವು ಸರ್ಪ್ರೈಸ್ಗಳನ್ನು ಸಹ ಕೊಡುತ್ತಿದ್ದಾರೆ. ಇದೀಗ ಬಿಗ್ಬಾಸ್ ಮನೆಗೆ ‘ರಾಮಾಚಾರಿ’ ಧಾರಾವಾಹಿಯ ನಟರು ಆಗಮಿಸಿದ್ದಾರೆ. ಮನೆಯವರೆಲ್ಲ ನಟ-ನಟಿಯರೊಡನೆ ಬೆರೆತು ಆಟವಾಡಿದ್ದಾರೆ. ಈ ಸಮಯದಲ್ಲಿ ಮನೆಯ ಸದಸ್ಯರ ಬಾಲ್ಯದ ನೆನಪುಗಳು ಹೊರಬಂದಿವೆ. ಬಿಗ್ಬಾಸ್, ಎಲ್ಲ ಸದಸ್ಯರ ಬಾಲ್ಯದ ಚಿತ್ರಗಳನ್ನು ತೋರಿಸಿ ಯಾರೆಂದು ಊಹಿಸುವಂತೆ ಇತರರಿಗೆ ಸೂಚಿಸಿದ್ದರು. ಎಲ್ಲರೂ ಖುಷಿಯಿಂದ ಟಾಸ್ಕ್ನಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ತಮಾಷೆಯ ಹಾಗೂ ಭಾವುಕ ಸನ್ನಿವೇಶಗಳು ಇದರಿಂದ ಸೃಷ್ಟಿವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 14, 2024 04:07 PM
Latest Videos