AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನೇ ಬಿಗ್​ ಬಾಸ್​’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಲಾಯರ್​ ಜಗದೀಶ್​

‘ನಾನೇ ಬಿಗ್​ ಬಾಸ್​’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಲಾಯರ್​ ಜಗದೀಶ್​

ಮದನ್​ ಕುಮಾರ್​
|

Updated on: Oct 02, 2024 | 4:42 PM

Share

ಲಾಯರ್​ ಜಗದೀಶ್​ ಅವರು ಬಿಗ್​ ಬಾಸ್​ ಮನೆಯಲ್ಲಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ‘ನಾನೇ ಬಿಗ್​ ಬಾಸ್​’ ಎನ್ನುವ ಮೂಲಕ ಅವರು ಸಿಡಿದೆದ್ದಿದ್ದಾರೆ. ಅಕ್ಟೋಬರ್​ 02ರ ಸಂಚಿಕೆಯಲ್ಲಿ ಅವರ ರೋಷಾವೇಷ ಕಾಣಿಸಲಿದೆ. ಅದರ ಝಲಕ್ ತೋರಿಸುವ ಪ್ರೋಮೋ ಬಿಡುಗಡೆ ಆಗಿದೆ. ಬಿಗ್ ಬಾಸ್​ ಮನೆಯಲ್ಲಿ ಇರುವ ಬಹುತೇಕ ಎಲ್ಲರೂ ಜಗದೀಶ್​ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಜಗಳದಿಂದಲೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ಸದ್ದು ಮಾಡುತ್ತಿದೆ. ಅನೇಕರ ಜೊತೆ ಲಾಯರ್​ ಜಗದೀಶ್​ ಕಿರಿಕ್​ ಶುರು ಮಾಡಿದ್ದಾರೆ. ‘ಎಲ್ಲರೂ ಮುಖವಾಡ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ನನ್ನ ಘನತೆ, ಗೌರವ ಹೊರಗಡೆ ಚೆನ್ನಾಗಿಯೇ ಇದೆ. ನಾನೇ ಬಿಗ್​ ಬಾಸ್​. ನಾನು ಹೊರಗೆ ಇರುವುದೇ ಉತ್ತಮ’ ಎಂದು ಜಗದೀಶ್​ ಹೇಳಿದ್ದಾರೆ. ಈ ಮಾತಿಗೆ ಸುದೀಪ್​ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More