ಹೇಗಿದೆ ನೋಡಿ ಬಿಗ್ ಬಾಸ್ ಹೊಸ ಮನೆ; ಈ ವಿಡಿಯೋ ಮೂಲಕ ಪ್ರತಿ ಮೂಲೆಯ ದರ್ಶನ

Updated on: Sep 06, 2026 | 12:31 PM

ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮೊದಲೇ ವೀಕ್ಷಕರಿಗೆ ದೊಡ್ಮನೆಯನ್ನು ತೋರಿಸಲಾಗುತ್ತಿದೆ. ಈ ಬಾರಿ ವಿಮಾನಯಾನದ ಥೀಮ್​ನಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್​ಗೆ ತಕ್ಕಂತೆ ಹೊಸ ರೀತಿಯಲ್ಲಿ ಮನೆಯ ವಿನ್ಯಾಸ ಮಾಡಲಾಗಿದೆ. ಮನೆ ಒಳಗಿನ ಪ್ರತಿ ಮೂಲೆಯ ದರ್ಶನ ಈ ವಿಡಿಯೋದಲ್ಲಿ ಆಗಿದೆ.

ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮೊದಲೇ ವೀಕ್ಷಕರಿಗೆ ದೊಡ್ಮನೆಯನ್ನು ತೋರಿಸಲಾಗುತ್ತಿದೆ. ಈ ಬಾರಿ ವಿಮಾನಯಾನದ ಥೀಮ್​ನಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್​ಗೆ ತಕ್ಕಂತೆ ಹೊಸ ರೀತಿಯಲ್ಲಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಗಾರ್ಡನ್ ಏರಿಯಾ, ಕಿಚನ್, ಬೆಡ್ ರೂಮ್, ಲಿವಿಂಗ್ ಏರಿಯಾ, ಟಾಸ್ಕ್ ನಡೆಯುವ ಸ್ಥಳ, ಕನ್​ಫೆಷನ್ ರೂಮ್, ಬಾಲ್ಕನಿ ಸೇರಿದಂತೆ ಬಿಗ್ ಬಾಸ್ ಮನೆ ಒಳಗಿನ ಪ್ರತಿ ಮೂಲೆಯ ದರ್ಶನವನ್ನು ಈ ವಿಡಿಯೋದಲ್ಲಿ ಮಾಡಿಸಲಾಗಿದೆ. ಕಿಚ್ಚ ಸುದೀಪ್ ಅವರು ಇಂದು (ಸೆಪ್ಟೆಂಬರ್ 6) ಸಂಜೆ 7 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಷ್ಟು ವರ್ಷಗಳ ಕಾಲ ಯಶಸ್ವಿಯಾಗಿ 12 ಸೀಸನ್​ಗಳು ಮುಗಿದಿವೆ. 13ನೇ ಸೀಸನ್ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More