ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಅಶ್ಲೀಲ ಮಾತುಗಳನ್ನು ಆಡಿದ್ದರಿಂದ ಮಂಜ ಅವರನ್ನು ಎಲಿಮಿನೇಟ್ ಮಾಡಲಾಯಿತು. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಂಜು ಅವರು ತಮ್ಮ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಬಿಗ್ ಬಾಸ್ಗೆ ಬರುವುದಕ್ಕೂ ಮುನ್ನ ಹಲವು ಕೆಲಸ ಮಾಡಿದ್ದೇನೆ’ ಎಂದು ಮಂಜ ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಅಶ್ಲೀಲ ಮಾತುಗಳನ್ನು ಆಡಿದ್ದರಿಂದ ಮಂಜ ಅವರನ್ನು ಎಲಿಮಿನೇಟ್ ಮಾಡಲಾಯಿತು. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಂಜ ಅವರು ತಮ್ಮ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಬಿಗ್ ಬಾಸ್ಗೆ ಬರುವುದಕ್ಕೂ ಮುನ್ನ ಹಲವು ಕೆಲಸ ಮಾಡಿದ್ದೇನೆ. ನಾನು ಮತ್ತು ಅಮ್ಮ ಜೊತೆಯಾಗಿ ಕುಳಿತುಕೊಂಡು ಬಿಗ್ ಬಾಸ್ ನೋಡುತ್ತಿದ್ದೆವು. ಈಗ ನಾನೇ ಈ ಶೋಗೆ ಬಂದಿದ್ದು ನನಗೆ ಜೀವಮಾನದ ಸಾಧನೆ. ಅಮ್ಮ ಹೂವು ಕಟ್ಟುತ್ತಾರೆ. ಅಕ್ಕ ಪಾರ್ಲರ್ ಕೆಲಸಕ್ಕೆ ಹೋಗುತ್ತಾರೆ. ಕಷ್ಟವನ್ನು ಇಷ್ಟಪಟ್ಟು ಬಂದವನು ನಾನು’ ಎಂದು ಮಂಜ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಾವು ಆಡಿದ ಅಸಭ್ಯ ಮಾತುಗಳ ಬಗ್ಗೆಯೂ ಮಂಜ ಪ್ರತಿಕ್ರಿಯೆ ನೀಡಿದ್ದಾರೆ. ‘ಉಳಿದವರು ಇಂಗ್ಲಿಷ್ನಲ್ಲಿ ಬೈಯುತ್ತಾರೆ. ನಾನು ಅದನ್ನೇ ಕನ್ನಡದಲ್ಲಿ ಬೈಯುತ್ತೇನೆ ಅಷ್ಟೇ. ಅದನ್ನು ಮತ್ತೆ ಹೇಳೋಕೆ ನಾನು ಇಷ್ಟಪಡಲ್ಲ. ತಪ್ಪಾಗಿದೆ, ತಿದ್ದಿಕೊಳ್ಳುತ್ತೇನೆ’ ಎಂದು ಮಂಜ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
