Loading video

‘ಸಂತು ಕಡೆಯಿಂದ ತಪ್ಪಾಗಿಹೋಯ್ತು’: ತಾಯಿ ನಿಧನದ ಬಗ್ಗೆ ಪತ್ನಿ ತೆರೆದಿಟ್ಟ ಬೇಸರದ ವಿಷಯ

| Updated By: ಮದನ್​ ಕುಮಾರ್​

Updated on: Oct 21, 2023 | 8:18 AM

ಬಿಗ್​ ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್​ ಬಗ್ಗೆ ಅವರ ಪತ್ನಿ ಮಾನಸಾ ಮಾತನಾಡಿದ್ದಾರೆ. ‘ಸಂತು ಮೊದಲೇ ಎಚ್ಚೆತ್ತುಕೊಂಡಿದ್ದರೆ ತಾಯಿಯನ್ನು ಉಳಿಸಿಕೊಳ್ಳಬಹುದಿತ್ತು ಅನಿಸುತ್ತೆ. ನೋಡಿಕೊಳ್ಳೋರು ಯಾರೂ ಇಲ್ಲದೇ ಆಸ್ಪತ್ರೆಗೆ ಸರಿಯಾಗಿ ತೋರಿಸೋಕೆ ಆಗಲಿಲ್ಲ. ಸಂತು ಕಡೆಯಿಂದ ತಪ್ಪಾಗಿಹೋಯ್ತು’ ಎಂದು ಮಾನಸಾ ಹೇಳಿದ್ದಾರೆ.

ಹಾಸ್ಯ ನಟ ತುಕಾಲಿ ಸಂತೋಷ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಗ್​ ಬಾಸ್​ (Bigg Boss Kannada) ಕಾರ್ಯಕ್ರಮಕ್ಕೆ ಬಂದ ಸೆಲೆಬ್ರಿಟಿಗಳ ಇನ್ನೊಂದು ಮುಖ ಏನು ಎಂಬುದು ಗೊತ್ತಾಗುತ್ತದೆ. ಅವರ ಖಾಸಗಿ ಬದುಕಿನ ಅನೇಕ ವಿಚಾರಗಳು ಹೊರಬರುತ್ತವೆ. ತುಕಾಲಿ ಸಂತು (Tukali Santhosh) ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ವಿಚಾರದ ಬಗ್ಗೆ ಸಂತು ಪತ್ನಿ (Tukali Santhosh Wife) ಮಾಸನಾ ಮಾತನಾಡಿದ್ದಾರೆ. ‘ಅಮ್ಮನನ್ನು ಸಂತು ತುಂಬ ಪ್ರೀತಿಸುತ್ತಿದ್ದರು. ಅತ್ತೆ ಇದ್ದಿದ್ದರೆ ಇಂದು ನನಗೆ ಅವರು ಸಪೋರ್ಟ್​ ಮಾಡುತ್ತಿದ್ದರು. ಸಂತು ತುಂಬ ಬಡತನದಲ್ಲಿ ಇದ್ದಾಗ ಅವನ ಜೊತೆ ಅಮ್ಮ ಇದ್ದರು. ಆದರೆ ಚೆನ್ನಾಗಿ ನೋಡಿಕೊಳ್ಳುವ ಕಾಲ ಬಂದಾಗ ಅಮ್ಮ ಇರಲಿಲ್ಲ. ಸಂತು ಮೊದಲೇ ಎಚ್ಚೆತ್ತುಕೊಂಡಿದ್ದರೆ ತಾಯಿಯನ್ನು ಉಳಿಸಿಕೊಳ್ಳಬಹುದಿದ್ದೇನೋ. ನೋಡಿಕೊಳ್ಳೋರು ಯಾರೂ ಇಲ್ಲದೇ ಆಸ್ಪತ್ರೆಗೆ ಸರಿಯಾಗಿ ತೋರಿಸೋಕೆ ಆಗಲಿಲ್ಲ. ಸಂತು ಕಡೆಯಿಂದ ತಪ್ಪಾಗಿಹೋಯ್ತು. ಈಗ ನಾವು ತುಂಬ ಕೊರುಗುತ್ತೇವೆ. ಅವರು ಇದ್ದಿದ್ದರೆ ಈಗ ಮನನನ್ನು ನೋಡಿ ತುಂಬ ಖುಷಿಪಟ್ಟಿರುತ್ತಿದ್ದರು’ ಎಂದು ಮಾನಸಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.