
ತೆಲುಗು ಬಿಗ್ಬಾಸ್ ಸೀಸನ್ 09 (Telugu Bigg Boss season 09) ಫಿನಾಲೆಗೆ ಬಂದು ತಲುಪಿದೆ. 98 ದಿನಗಳ ಮುಗಿದಿದ್ದು, ಈ ವಾರ ಫಿನಾಲೆ ವಾರ ಆಗಿರಲಿದೆ. ಕನ್ನಡತಿಯರಾದ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂಸಹ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಒಟ್ಟು ಐವರು ಫಿನಾಲೆಗೆ ಎಂಟ್ರಿ ನೀಡಿದ್ದು, ನಿಜವಾದ ಫೈಟ್ ಇರುವುದು ಇಬ್ಬರು ಸ್ಪರ್ಧಿಗಳ ನಡುವೆ ಎನ್ನಲಾಗುತ್ತಿದೆ. ಸಂಜನಾ ಮತ್ತು ತನುಜಾ ಅವರಿಗೆ ಗೆಲ್ಲುವ ಅವಕಾಶ ಇದೆಯಾ? ಇಲ್ಲಿದೆ ಮಾಹಿತಿ…
ಭಾನುವಾರದ ಎಪಿಸೋಡ್ನಲ್ಲಿ ಭರಣಿ ಮತ್ತು ನಟ ಸುಮನ್ ಅವರು ಎಲಿಮಿನೇಟ್ ಆಗುವ ಮೂಲಕ ಐವರು ಫಿನಾಲೆ ತಲುಪಿದರು. ತನುಜಾ, ಸಂಜನಾ, ಕಲ್ಯಾಣ್, ಇಮಾನ್ಯುವೆಲ್ ಮತ್ತು ಪವನ್ ಅವರುಗಳು ಈಗ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ತನುಜಾ ಮತ್ತು ಸಂಜನಾ ಇಬ್ಬರೂ ಸಹ ಶೋನ ಆರಂಭದಿಂದಲೂ ಅದ್ಭುತವಾಗಿ ಆಡುತ್ತಾ ಬರುತ್ತಿದ್ದಾರೆ. ಅಸಲಿಗೆ ಮೂರನೇ ವಾರವೇ ಸಂಜನಾ ಅವರು ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಅದು ಸರ್ಪ್ರೈಸ್ ಎಲಿಮಿನೇಷನ್ ಆಗಿತ್ತು, ಮರಳಿ ಮನೆಗೆ ಬಂದ ಸಂಜನಾ ಅದ್ಭುತವಾಗಿ ಆಡುತ್ತಾ, ಇದೀಗ ಫಿನಾಲೆ ತಲುಪಿದ್ದಾರೆ.
ಇನ್ನು ತನುಜಾ ಅವರು ಆರಂಭದಿಂದಲೂ ಬಹಳ ಚೆನ್ನಾಗಿ ಆಡುತ್ತಾ ಬಂದಿದ್ದಾರೆ. ತನುಜಾ ಅವರು ಮೊದಲಿನಿಂದಲೂ ತಮ್ಮ ಸಮಚ್ಛಿತ್ತದ ಆಟದಿಂದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಕೆಲವು ಟಾಸ್ಕ್ಗಳಲ್ಲಿ ತಮ್ಮ ಏಕಾಗ್ರತೆ, ಶಕ್ತಿಯನ್ನು ಪ್ರದರ್ಶಿಸುವ ಜೊತೆಗೆ ಸಖತ್ ಎಂಟರ್ಟೈನ್ ಸಹ ಮಾಡಿದ್ದಾರೆ. ತನುಜಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದು ಈ ಬಾರಿ ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:ತೆಲುಗು ಬಿಗ್ಬಾಸ್ ಫಿನಾಲೆ ತಲುಪಿದ ಕನ್ನಡತಿ ತನುಜಾ
ಆದರೆ ತನುಜಾಗೆ ಪ್ರಬಲ ಪೈಪೋಟಿ ಒಡ್ಡುತ್ತಿರುವುದು ಕಲ್ಯಾಣ್. ಇವರು ತಮ್ಮ ಆಟ, ಒಳ್ಳೆಯ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಳೆದ ವಾರವೇ ಫಿನಾಲೆ ಸ್ಪರ್ಧಿಯಾಗಿ ಕಲ್ಯಾಣ್ ಆಯ್ಕೆ ಆಗಿದ್ದು, ಅವರು ಸಹ ಗೆಲ್ಲುವ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಈಗ ಕಲ್ಯಾಣ್ ಮತ್ತು ತನುಜಾ ನಡುವೆ ಪ್ರಬಲ ಪೈಪೋಟಿ ಇದೆ. ಇನ್ನು ಇಮಾನ್ಯುಯೆಲ್ ಸಹ ಒಳ್ಳೆಯ ಸ್ಪರ್ಧಿ ಆಗಿದ್ದು, ಅವರೂ ಸಹ ತಮ್ಮ ಹಾಸ್ಯ, ಉತ್ತಮ ವ್ಯಕ್ತಿತ್ವದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ತೆಲುಗು ಬಿಗ್ಬಾಸ್ ಸೀಸನ್ 09 ಸೆಪ್ಟೆಂಬರ್ 09ರಂದು ಪ್ರಾರಂಭ ಆಗಿದ್ದು, ಈಗ 99 ದಿನಗಳ ಆಟವನ್ನು ಮುಗಿಸಿದೆ. ಈ ಬಾರಿ ವಿನ್ನರ್ ಆದವರಿಗೆ 50 ಲಕ್ಷ ರೂಪಾಯಿ ನಗದು ಹಣ ಸಿಗಲಿದೆ. ಜೊತೆಗೆ ಬಿಗ್ಬಾಸ್ ಟ್ರೋಫಿ ಮತ್ತು ಕೆಲವು ಉಡುಗೊರೆಗಳು ಸಹ ಸಿಗಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Tue, 16 December 25