ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
ಬಿಗ್ ಬಾಸ್ ವಿನ್ನರ್ ಗಿಲ್ಲಿ ತಮ್ಮ ಪಯಣದ ಕುರಿತು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರ ಚಪ್ಪಾಳೆ, ಶಿವಣ್ಣ ಅವರ ಶುಭ ಹಾರೈಕೆ ಹಾಗೂ ಡೆವಿಲ್ ಚಿತ್ರೀಕರಣದ ವೇಳೆ ಡಿ-ಬಾಸ್ ದರ್ಶನ್ ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿದ್ದು ಮರೆಯಲಾಗದ ಕ್ಷಣಗಳಾಗಿವೆ ಎಂದು ಗಿಲ್ಲಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಯಾವುದೇ ಬೇಸರದ ಘಟನೆಗಳು ಇಲ್ಲ ಎಂದು ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ, ಬಿಗ್ ಬಾಸ್ ಮನೆಯೊಳಗಿನ ಅನುಭವಗಳ ಬಗ್ಗೆ ಹಂಚಿಕೊಳ್ಳುವ ವೇಳೆ ದರ್ಶನ ಅವರ ಬಗ್ಗೆಯೂ ಅಚ್ಚರಿಯ ವಿಚಾರಗಳನ್ನು ಹೇಳಿದ್ದಾರೆ. ಡೆವಿಲ್ ಚಿತ್ರೀಕರಣದ ವೇಳೆ ಡಿ ಬಾಸ್ ದರ್ಶನ್ ಅವರನ್ನು ಭೇಟಿ ಮಾಡಿದ್ದ ಘಟನೆಯನ್ನು ಗಿಲ್ಲಿ ಟಿವಿ9 ಕನ್ನಡ ಜತೆಗೆ ಹಂಚಿಕೊಂಡಿದ್ದಾರೆ. ‘ದರ್ಶನ್ ಅವರು ನನ್ನನ್ನು ಕರೆದು ಹಾಸ್ಯ ಪ್ರಜ್ಞೆಯನ್ನು ಮೆಚ್ಚಿ, ನೀವು ಕಾಮಿಡಿ ಎಲ್ಲಾ ಸಕ್ಕತ್ತಾಗಿ ಮಾಡ್ತೀರಾ ಎಂದು ಹೇಳಿದ್ದರು. ದರ್ಶನ ಜತೆಗೆ ಈ ಸಿನಿಮಾದಲ್ಲಿ ನಟಿಸಿರುವುದು ನನಗೆ ತುಂಬಾ ಖುಷಿ ಇದೆ. ಜತೆಗೆ ಇದು ನನ್ನ ಅದೃಷ್ಟ’ ಎಂದು ಗಿಲ್ಲಿ ಹೇಳಿದ್ದಾರೆ. ಇದರ ಜತೆಗೆ ನಟ ಶಿವರಾಜ್‌ಕುಮಾರ್ ಅವರು ಗಿಲ್ಲಿ ವಿನ್ನರ್ ಆಗಿ ಹೊರಬಂದಾಗ ಶುಭ ಹಾರೈಸಿದ್ದಾರೆ ಎಂದು ಹೇಳಿದ್ದಾರೆ. ಜನರಿಂದ ಸಿಕ್ಕ ಪ್ರೀತಿ, ಸೆಲೆಬ್ರಿಟಿಗಳ ಮೆಚ್ಚುಗೆಯನ್ನು ಗಿಲ್ಲಿ ಮರೆಯಲಾಗದ ನೆನಪು ಎಂದು ಬಣ್ಣಿಸಿದ್ದಾರೆ.
ಬಿಗ್ ಬಾಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
