ಹಾಸನ-ಸೋಲಾಪುರ ಎಕ್ಸ್ಪ್ರೆಸ್ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಅದು ಬೆಂಗಳೂರು ಮಾರ್ಗವಾಗಿ ಹಾಸನಕ್ಕೆ ತೆರಳುವ ಹಾಸನ-ಸೋಲಾಪುರ ಎಕ್ಸ್ಪ್ರೆಸ್ ರೈಲು. ಸೋಮವಾರ ಬೆಳಗ್ಗೆ ಕಲಬುರಗಿ ತಲುಪಿದಾಗ ರೈಲಿನಲ್ಲಿ ನೀರು ಬಾರದೆ ಪ್ರಯಾಣಿಕರು ಪರದಾಡಿದರು. ಎಕ್ಸ್ಪ್ರೆಸ್ ರೈಲಿನಲ್ಲೂ ಸರಿಯಾದ ವ್ಯವಸ್ಥೆ ಇಲ್ಲದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ನೀರಿಲ್ಲದೆ ಪ್ರಯಾಣಿಕರು ಒದ್ದಾಡಿದ ವಿಡಿಯೋ ಇಲ್ಲಿದೆ ನೋಡಿ.
ಕಲಬುರಗಿ, ಜನವರಿ 19: ಹಾಸನ-ಸೋಲಾಪುರ ಎಕ್ಸ್ಪ್ರೆಸ್ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರು ಸೋಮವಾರ ಪರದಾಟ ಪಡುವಂತಾಯಿತು. ರೈಲಿನ ಸ್ಲೀಪರ್ ಕೋಚ್ ಬೋಗಿಗಳಲ್ಲಿ ಬೆಳಗ್ಗೆ ನೀರು ಬಾರದೆ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ರೈಲು ಬೆಂಗಳೂರು ಮಾರ್ಗವಾಗಿ ಹಾಸನಕ್ಕೆ ಸಂಚರಿಸುತ್ತದೆ. ರೈಲಿನಲ್ಲಿ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
