ಪ್ರಜ್ವಲ್ ರೇವಣ್ಣ ವಿರುದ್ಧ ಬಂದಿರುವ ತೀರ್ಪಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಪ್ರಿಯಾಂಕ್ ಖರ್ಗೆ

Updated on: Aug 01, 2025 | 4:09 PM

ನ್ಯಾಯಾಲಯವೇ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಅಂತ ಹೇಳಿದೆ, ತಾನು ಅಂದುಕೊಳ್ಳುವ ಹಾಗೆ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ನ್ಯಾಯಾಲಯ ದೋಷಿ ಅಂತ ಹೇಳಿದೆ, ಇನ್ನೂ ಮೂರ್ನಾಲ್ಕು ಪ್ರಕರಣಗಳ ವಿಚಾರಣೆ ನಡೆಯಬೇಕಿದೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಉತ್ತರ ನೀಡಬೇಕು, ಪ್ರಜ್ವಲ್, ಸೂರಜ್, ಮುನಿರತ್ನ ಎಲ್ಲರ ವಿರುದ್ಧ ದಾಖಲಾಗಿರೋದು ಅತ್ಯಾಚಾರದ ಪ್ರಕರಣಗಳು ಎಂದು ಖರ್ಗೆ ಹೇಳಿದರು.

ದೆಹಲಿ, ಆಗಸ್ಟ್ 1: ದೆಹಲಿ ಪ್ರವಾಸದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮಾಧ್ಯಮಗಳ ಜೊತೆ ಮಾತಾಡುತ್ತ, ಜನಪ್ರತಿನಿಧಿಗಳ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಪಿತ್ತರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕಿನ್ನೂ ಸುಮ್ಮನಿದ್ದಾರೆ? ಅಂತ ಪ್ರಶ್ನಿಸಿದರು. ಪ್ರಜ್ವಲ್ ರೇವಣ್ಣನ ಸಂಬಂಧಿಯೊಬ್ಬರು ಕೇಂದ್ರದಲ್ಲಿ ಸಚಿವರಾಗಿದ್ದಾರಲ್ಲ? ಅವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಇವರೆಲ್ಲರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಗುರಾಣಿಗಳಾಗಿ ಬಳಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೇಕು, ಪ್ರಜ್ವಲ್ ಅಥವಾ ಸೂರಜ್ ರೇವಣ್ಣ ಮಾಡಿದ್ದು ತಪ್ಪು ಅಂತ ಒಬ್ಬ ಬಿಜೆಪಿ, ಜೆಡಿಎಸ್ ನಾಯಕನಾದರೂ ಹೇಳಿದ್ದಾನಾ? ಎಂದು ಖರ್ಗೆ ಪ್ರಶ್ನಿಸಿದರು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ