BJP Bellary Chalo Padayatra Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ

Updated on: Sep 01, 2026 | 12:53 PM

ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಬಿಜೆಪಿಯ 'ಬಳ್ಳಾರಿ ಚಲೋ' ಬೃಹತ್ ಪಾದಯಾತ್ರೆ ಇಂದಿನಿಂದ ಆರಂಭವಾಗಿದೆ. 10 ದಿನಗಳ ಕಾಲ 175 ಕಿ.ಮೀ. ಸಾಗಲಿರುವ ಈ ಯಾತ್ರೆಯು ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯ 9 ಕ್ಷೇತ್ರಗಳನ್ನು ತಲುಪಲಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದು, 10ನೇ ದಿನ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ರಾಯಚೂರು, ಸೆಪ್ಟೆಂಬರ್ 01: ಇಂದಿನಿಂದ ‘ಬಳ್ಳಾರಿ ಚಲೋ’ ಹೆಸರಿನಲ್ಲಿ ಬಿಜೆಪಿಯ ಬೃಹತ್ ಪಾದಯಾತ್ರೆ ಆರಂಭವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಚಾಲನೆ ಸಿಕ್ಕಿರುವ ಈ ಪಾದಯಾತ್ರೆಯು 10 ದಿನಗಳ ಕಾಲ ಒಟ್ಟು 175 ಕಿ.ಮೀ. ಸಾಗಲಿದೆ. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ 9 ವಿಧಾನಸಭಾ ಕ್ಷೇತ್ರಗಳಾದ ಲಿಂಗಸುಗೂರು, ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ ಮತ್ತು ಕುಡತಿನಿ ಮಾರ್ಗವಾಗಿ ಸಾಗಲಿದೆ. ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಬಿ.ಎಸ್ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಹಾಗೂ ಆರ್. ಅಶೋಕ್ ಭಾಗವಹಿಸಲಿದ್ದು, 10ನೇ ದಿನ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us