AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಶನ್ ಕಮಲ ನಡೆಸುವ ಮೂಲಕ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಸಿದ್ದರಾಮಯ್ಯ

ಆಪರೇಶನ್ ಕಮಲ ನಡೆಸುವ ಮೂಲಕ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 11, 2024 | 10:22 AM

Share

ಕೊರೋನಾ ಹಾವಳಿಯಲ್ಲಿ ರೂ. 335 ಗೆ ಸಿಗುತ್ತಿದ್ದ ಪಿಪಿಈ ಕಿಟ್ ಚೀನಾದಿಂದ ₹ 2147 ಕೊಟ್ಟು ಅಮದು ಮಾಡಿಕೊಂಡ ಯಡಿಯೂರಪ್ಪ, ಬಿ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್ ರಾಜ್ಯವನ್ನು ಲೂಟಿ ಹೊಡೆದರು. ಇವರ ಲೂಟಿಕೋರತನ ಹಾಗೂ ಬೇಜವಾಬ್ದಾರಿಯಿಂದ 50,000 ಕ್ಕೂ ಹೆಚ್ಚು ಜನ ಬಲಿಯಾದರು ಎಂದು ಸಿದ್ದರಾಮಯ್ಯ ಹೇಳಿದರು.

ಹಾವೇರಿ: ಶಿಗ್ಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವತ್ತೂ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ, 2008ರಲ್ಲಿ ಬಿಜೆಪಿಗೆ ಸಿಕ್ಕಿದ್ದು 110 ಸ್ಥಾನ ಮಾತ್ರ ಆದರೆ ಜನಾರ್ಧನರೆಡ್ಡಿ ಆಪರೇಶನ್ ಕಮಲ ನಡೆಸಿ ಬಿಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದರು, ಹಾಗೆಯೇ 2018ರಲ್ಲಿ ಬಿಜೆಪಿಗೆ ದಕ್ಕಿದ್ದು 104 ಸೀಟು ಮಾತ್ರ, ಆಗಲೂ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್ ಜಮೀನು ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯ 2014ರ ಬಿಜೆಪಿ ಪ್ರಣಾಳಿಕೆಯನ್ನು ಓದಿ ಹೇಳಿದ ಸಿದ್ದರಾಮಯ್ಯ