ಬಿಜೆಪಿ ಸರ್ಕಾರ ಕರ್ನಾಟಕವನ್ನು ‘ಕರಪ್ಶನ್ ಕ್ಯಾಪಿಟಲ್’ ಮಾಡಿದೆ ಎಂದರು ಡಿಕೆ ಶಿವಕುಮಾರ
ಗುತ್ತಿಗೆದಾರರು ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲಿ ಅಂತ ಒತ್ತಾಯಿಸಿದರೆ ಸರ್ಕಾರ ನಿರಾಕರಿಸುತ್ತಿದೆ ಅದರರ್ಥ ಸರ್ಕಾರದ ಪ್ರತಿನಿಧಿಗಳು ಕಮೀಷನ್ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
Bengaluru: ಚುನಾವಣಾ ವರ್ಷದಲ್ಲಿ ಕರ್ನಾಟಕ ಕಾಂಗ್ರೆಸ್ ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಮಾಡಿರುವ 40 ಪರ್ಸೆಂಟ್ ಕಮೀಶನ್ ಆರೋಪ ಭರ್ಜರಿ ಅಸ್ತ್ರವಾಗಿ ಸಿಕ್ಕಿದೆ. ಕೆಂಪಣ್ಣ ಬುಧವಾರ ಸಿದ್ದರಾಮಯ್ಯರನ್ನು (Siddaramaiah) ಭೇಟಿಯಾದ ಬಳಿಕ ಕಾಂಗ್ರೆಸ್ ಎಲ್ಲ ವೇದಿಕೆಗಳಲ್ಲಿ ಇದರ ಪ್ರಸ್ತಾಪ ಮಾಡುತ್ತಿದೆ. ಗುತ್ತಿಗೆದಾರರು ಪ್ರಕರಣದ ನ್ಯಾಯಾಂಗ ತನಿಖೆ ನಡೆಸಲಿ ಅಂತ ಒತ್ತಾಯಿಸಿದರೆ ಸರ್ಕಾರ ನಿರಾಕರಿಸುತ್ತಿದೆ ಅದರರ್ಥ ಸರ್ಕಾರದ ಪ್ರತಿನಿಧಿಗಳು ಕಮೀಷನ್ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾತಾಡಿ ಬಿಜೆಪಿ ಸರ್ಕಾರ ಕರ್ನಾಟಕವನ್ನು ಕರಪ್ಶನ್ ಕ್ಯಾಪಿಟಲ್ ಮಾಡಿದೆ ಎಂದಿದ್ದಾರೆ.
Latest Videos