‘ಲೈಗರ್’ ಅಬ್ಬರ ಕಂಡು ಅಭಿಪ್ರಾಯ ತಿಳಿಸಿದ ಫ್ಯಾನ್ಸ್; ವಿಜಯ್ ದೇವರಕೊಂಡ ಸಿನಿಮಾ ಹೇಗಿದೆ?
Liger Movie Audience Reaction: ಬೆಂಗಳೂರಿನಲ್ಲಿ ‘ಲೈಗರ್’ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರು ಈ ಚಿತ್ರದಲ್ಲಿ ಬಾಕ್ಸರ್ ಪಾತ್ರ ಮಾಡಿದ್ದಾರೆ.
ಭಾರಿ ಹೈಪ್ ಸೃಷ್ಟಿ ಮಾಡಿದ್ದ ‘ಲೈಗರ್’ ಸಿನಿಮಾ (Liger Movie) ಇಂದು (ಆಗಸ್ಟ್ 25) ರಿಲೀಸ್ ಆಗಿದೆ. ತೆಲುಗಿನ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗೆ ಡಬ್ ಆಗಿಯೂ ತೆರೆಕಂಡಿದೆ. ಮೊದಲ ದಿನ ಮೊದಲ ಶೋ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ವಿಜಯ್ ದೇವರಕೊಂಡ (Vijay Deverakonda) ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಒಟ್ಟಾರೆ ಸಿನಿಮಾ ವಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ‘ಲೈಗರ್’ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ (Liger Review) ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅಭಿಮಾನಿಗಳು ಈ ಸಿನಿಮಾವನ್ನು ಸಖತ್ ಮೆಚ್ಚಿಕೊಂಡಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ.
Published on: Aug 25, 2022 02:35 PM
Latest Videos