Liger Twitter Review: ‘ಲೈಗರ್​’ ಮೊದಲ ಶೋ ನೋಡಿ ಬಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಯ್ತಾ?

Liger | Vijay Deverakonda: ಎಲ್ಲೆಲ್ಲೂ ‘ಲೈಗರ್​’ ಸಿನಿಮಾ ಸದ್ದು ಮಾಡುತ್ತಿದೆ. ವಿಜಯ್​ ದೇವರಕೊಂಡ ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಖುಷಿಪಟ್ಟಿದ್ದಾರೆ.

Liger Twitter Review: ‘ಲೈಗರ್​’ ಮೊದಲ ಶೋ ನೋಡಿ ಬಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಯ್ತಾ?
ವಿಜಯ್ ದೇವರಕೊಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Aug 25, 2022 | 10:04 AM

ಬಹುನಿರೀಕ್ಷಿತ ‘ಲೈಗರ್​’ ಸಿನಿಮಾ (Liger Movie) ದೇಶಾದ್ಯಂತ ಬಿಡುಗಡೆ ಆಗಿದೆ. ದಕ್ಷಿಣ ಭಾರತದ ಚಿತ್ರಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಇಲ್ಲಿನ ಬಿಗ್​ ಬಜೆಟ್​ ಚಿತ್ರಗಳನ್ನು ನೋಡಲು ಉತ್ತರ ಭಾರತದ ಮಂದಿ ಕೂಡ ಇಷ್ಟಪಡುತ್ತಾರೆ ಎಂಬುದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಕ್ಕಿವೆ. ಅದೇ ರೀತಿ ಭರವಸೆಯನ್ನು ‘ಲೈಗರ್​’ ಸಿನಿಮಾ ಮೇಲೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ (Vijay Deverakonda) ಮುಖ್ಯ ಪಾತ್ರ ಮಾಡಿದ್ದಾರೆ. ಬಾಕ್ಸರ್​ ಆಗಿ ಅವರು ಅಬ್ಬರಿಸಿದ್ದಾರೆ. ಅವರ ಜೊತೆ ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್ ಟೈಸನ್​ ಕೂಡ ನಟಿಸಿದ್ದಾರೆ. ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸಿದ್ದಾರೆ. ಪುರಿ ಜಗನ್ನಾಥ್​ ನಿರ್ದೇಶನ ಮಾಡಿದ್ದು, ಪಕ್ಕಾ ಮಾಸ್​ ಶೈಲಿಯಲ್ಲಿ ಈ ಚಿತ್ರ ಮೂಡಿಬಂದಿದೆ.​ ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಟ್ವಿಟರ್​ ವಿಮರ್ಶೆ (Liger Movie Twitter Review) ಹಂಚಿಕೊಂಡಿದ್ದಾರೆ. ವಿಜಯ್​ ದೇವರಕೊಂಡ ಅಭಿಮಾನಿಗಳಿಗೆ ಈ ಸಿನಿಮಾ ಸಖತ್ ಇಷ್ಟ ಆಗಿದೆ.

‘ಫೈಟರ್​ ಬದುಕಿನ ಪಯಣದ ಬಗ್ಗೆ ಮೂಡಿಬಂದ ಬೆಸ್ಟ್​ ಸಿನಿಮಾ ಇದು. ಸಾಹಸ ದೃಶ್ಯಗಳು ತುಂಬ ಚೆನ್ನಾಗಿವೆ. ಎಂದಿನಂತೆ ವಿಜಯ್​ ದೇವರಕೊಂಡ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೈಕ್​ ಟೈಸನ್​ ಅವರ ಪಾತ್ರ ಕೂಡ ಚೆನ್ನಾಗಿದೆ. ಅನನ್ಯಾ ಪಾಂಡೆ ಅವರು ತುಂಬ ಸುಂದರವಾಗಿ ಕಾಣುತ್ತಾರೆ’ ಎಂದು ಅಭಿಮಾನಿಯೊಬ್ಬರು ವಿಮರ್ಶೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Image
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

ಅನುಭವಿ ನಟಿ ರಮ್ಯಾ ಕೃಷ್ಣ ಹಾಗೂ ವಿಜಯ್​ ದೇವರಕೊಂಡ ಅವರು ತಾಯಿ-ಮಗನ ಪಾತ್ರದಲ್ಲಿ ನಟಿಸಿದ್ದಾರೆ. ‘ಅಮ್ಮ-ಮಗನ ದೃಶ್ಯಗಳು ಸಖತ್​ ಆಗಿವೆ. ಆ ಪಾತ್ರಗಳಿಗೆ ರಮ್ಯಾ ಕೃಷ್ಣ ಮತ್ತು ವಿಜಯ್​ ದೇವರಕೊಂಡ ಆಯ್ಕೆ ಸೂಕ್ತವಾಗಿದೆ. ಹೀರೋ ಪಾತ್ರವನ್ನು ಚೆನ್ನಾಗಿ ತೋರಿಸುವಲ್ಲಿ ಪುರಿ ಜಗನ್ನಾಥ್​ ಯಾಕೆ ಬೆಸ್ಟ್​ ಎಂಬುದು ಲೈಗರ್​ ಸಿನಿಮಾದಲ್ಲಿ ಮತ್ತೊಮ್ಮೆ ಸಾಬೀತಾಗಿದೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಎಂದಮೇಲೆ ಮಿಶ್ರ ಪ್ರತಿಕ್ರಿಯೆ ಬರುವುದು ಸಹಜ. ಆದರೆ ಕೆಲವರು ಸಿನಿಮಾವನ್ನೇ ನೋಡದೇ ನೆಗೆಟಿವ್​ ಮಾತುಗಳನ್ನು ಹಬ್ಬಿಸುತ್ತಿದ್ದಾರೆ ಎಂಬುದು ವಿಜಯ್ ದೇವರಕೊಂಡ ಅಭಿಮಾನಿಗಳ ಆರೋಪ. ‘ಕೆಲವು ವಿರೋಧಿಗಳು ಸಿನಿಮಾ ನೋಡದೆಯೂ ನಕಲಿ ವಿಮರ್ಶೆ ತಿಳಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರನ್ನು ಕಂಡರೆ ಅವರೆಲ್ಲ ಹೆದರಿಕೊಳ್ಳುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಖಾಲಿ ಪಾತ್ರೆ ಸದಾ ಸದ್ದು ಮಾಡುತ್ತದೆ. ವಿಜಯ್​ ದೇವರಕೊಂಡ ಅವರ ಗೆಲುವಿನಿಂದ ಇಂಥವರಿಗೆ ಭಯ ಆಗಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ.

ಆಗಸ್ಟ್​ 25ರ ರಾತ್ರಿಯಿಂದ ಹಿಂದಿ ವರ್ಷನ್​ ಶೋಗಳು ಆರಂಭ ಆಗಲಿವೆ. ಉತ್ತರ ಭಾರತದ ಪ್ರೇಕ್ಷಕರು ಯಾರ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.