ಪವಾಡಸದೃಶ ರೀತಿಯಲ್ಲಿ ಸಾತ್ವಿಕ್ ನನ್ನು ಕಾಪಾಡಿದ ರಕ್ಷಣಾ ಕಾರ್ಯಾಚರಣೆ ತಂಡವನ್ನು ಅಭಿನಂದಿಸಿದ ಬಿಎಸ್ ಯಡಿಯೂರಪ್ಪ
ನಿನ್ನೆ ಸಾಯಂಕಾಲದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದರಲ್ಲಿ ಬಿದ್ದಿದ ಮಗುವನ್ನು ಒಂದು ಅತ್ಯಂತ ಶ್ಲಾಘನೀಯವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪವಾಡಸದೃಶ ರೀತಿಯಲ್ಲಿ ಮಗುವನ್ನು ರಕ್ಷಿಸಲಾಗಿದೆ. ಈ ಅಸಾಧರಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಿರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಂಡ್ಯ: ರಾಜ್ಯದೆಲ್ಲಡೆ ಸಾವು ಜಯಿಸಿ ಬಂದ ಎರಡು ವರ್ಷದ ಕಂದಮ್ಮ ಸಾತ್ವಿಕ್ ನದೇ (Sathvik) ಚರ್ಚೆ! ಚುನಾವಣಾ ಪ್ರಚಾರ ಸಭೆಗಳಲ್ಲಿ ಸಹ ನಾಯಕರು ಮಗು ಬದುಕಿ ಬಂದಿರುವ ಘಟನೆಯನ್ನು ಉಲ್ಲೇಖಿಸುತ್ತಾ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎಲ್ಲರನ್ನು ಅಭಿನಂದಿಸುತ್ತಿದ್ದಾರೆ. ಮಂಡ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ (BS Yediyurappa), ಮಗುವಿನ ಹರಸಾಹಸ ಪಟ್ಟು ರಕ್ಷಿಸಿದ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ (NDRF, SDRF) ಮತ್ತು ವೈದ್ಯಾಧಿಕಾರಿಗಳ ತಂಡವನ್ನು ಅಭಿನಂದಿಸಿದ್ದಾರೆ. ನಿನ್ನೆ ಸಾಯಂಕಾಲದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯೊಂದರಲ್ಲಿ ಬಿದ್ದಿದ ಮಗುವನ್ನು ಒಂದು ಅತ್ಯಂತ ಶ್ಲಾಘನೀಯವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪವಾಡಸದೃಶ ರೀತಿಯಲ್ಲಿ ಮಗುವನ್ನು ರಕ್ಷಿಸಲಾಗಿದೆ. ಈ ಅಸಾಧರಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಿರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಟಿಕೆಟ್; ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ಡಾ.ಮಂಜುನಾಥ್ ಹೇಳಿದ್ದಿಷ್ಟು