ನಿಮ್ಮ ಮಂತ್ರಿಗಳ ಭ್ರಷ್ಟಾಚಾರದ ಆಡಿಯೋ, ವಿಡಿಯೋ ಹೊರ ಬಂದಿದೆ ಎಂದ ಎಂಎಲ್ಸಿ ಸಿಟಿ ರವಿ
ಸಿ.ಟಿ. ರವಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ, ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲತೆ, ರೈತರ ಆತ್ಮಹತ್ಯೆ ಮತ್ತು ಗಾಂಜಾ-ಮಟ್ಕಾ ಹಾವಳಿಯನ್ನು ಆರೋಪಿಸಿದ್ದಾರೆ. ಭ್ರಷ್ಟಾಚಾರ ಮತ್ತು ಪೂರೈಸದ ಗ್ಯಾರಂಟಿಗಳ ಬಗ್ಗೆ ಪ್ರಶ್ನಿಸಿದ ಅವರು, ಸರ್ಕಾರ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು, ನವೆಂಬರ್ 01: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕರ್ನಾಟಕದಲ್ಲಿ ದಿನನಿತ್ಯ ಹತ್ಯೆ ಮತ್ತು ಅತ್ಯಾಚಾರ ನಡೆಯುತ್ತದೆ. ಇದು ಕರ್ನಾಟಕಕ್ಕೆ ಗೌರವ ತರುವಂತಹದ್ದಲ್ಲ. ಬೆಲೆ ಏರಿಕೆಯಿಂದ ಜನ ಸಂಕಷ್ಟಕ್ಕೀಡಾಗಿರುವುದು ನಿಮ್ಮ ಗಮನಕ್ಕಿಲ್ಲವೇ? ಕರ್ನಾಟಕ ಗಾಂಜಾ, ಮಟ್ಕಾ ದಂಧೆಗೆ ರಾಜಾಶ್ರಯ ಸಿಗುತ್ತಿದೆ ಎಂದು ಅನುಮಾನವಿದೆ. ನಿಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಕೆಲವು ಆಡಿಯೋ, ವೀಡಿಯೋ ಹೊರ ಬಂದಿದೆಯಲ್ಲಾ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 03, 2025 08:36 PM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
