ಬೆಳಗಾವಿ ಎಮ್ಮೆ ಓಡಿಸುವ ಸ್ಪರ್ಧೆ: ಕಾಂಗ್ರೆಸ್ ಪಕ್ಷದ ಹುಚ್ಚಾಟ ಮುಗಿಯಿತು, ಇನ್ನು ಬಿಜೆಪಿಯವರ ಸರದಿ!

ಬೆಳಗಾವಿ ಎಮ್ಮೆ ಓಡಿಸುವ ಸ್ಪರ್ಧೆ: ಕಾಂಗ್ರೆಸ್ ಪಕ್ಷದ ಹುಚ್ಚಾಟ ಮುಗಿಯಿತು, ಇನ್ನು ಬಿಜೆಪಿಯವರ ಸರದಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 16, 2022 | 1:01 AM

ಶಾಸಕರು ಮಾಸ್ಕ್ ಧರಿಸದೆ, ವೀರಾವೇಶದಿಂದ ಮರಾಠಿ ಭಾಷೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅವರ ಭಾಷಣ ಕೇಳುತ್ತಿದ್ದರೆ, ಇದು ಕರ್ನಾಟಕವಾ ಅಥವಾ ಮಹಾರಾಷ್ಟವಾ ಎಂಬ ಗೊಂದಲ ಮೂಡುತ್ತದೆ. ಸರಿ ಇನ್ನು ವೇದಿಕೆ ಮೇಲೆ ಕುಳಿತಿರುವ ಜನರನ್ನು ನೋಡಿ, ಅವರಲ್ಲಿ ಒಂದಿಬ್ಬರು ಮಾತ್ರ ಮಾಸ್ಕ್ ಧರಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ (Mekedatu Project) ಶೀಘ್ರ ಅನುಷ್ಠಾನ ಆಗ್ರಹಿಸಿ ನಡೆಸಿದ ಪಾದಯಾತ್ರೆಯನ್ನು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಖಂಡಿಸಲಾಯಿತು. ಕೋವಿಡ್ ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿದ್ದರೂ ಕೋರ್ಟ್ ಛೀಮಾರಿ ಹಾಕುವವರೆಗೆ 4-ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಕೋರ್ಟ್ ಆದೇಶಕ್ಕನುಗುಣವಾಗಿ ಕಾಂಗ್ರೆಸ್ (Congress) ಪಾದಯಾತ್ರೆ ನಿಲ್ಲಿಸಿದ್ದು ಎಲ್ಲ ರಾಜಕೀಯ ಒಂದು ಮಾದರಿಯಾಗುತ್ತದೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ನಮ್ಮ ರಾಜಕಾರಣಿಗಳು ದಪ್ಪ ಚರ್ಮದವರು ಮಾರಾಯ್ರೇ, ಅವರಿಗೆ ಬುದ್ಧಿಮಾತು ಬೇಗ ಅರ್ಥವಾಗುವುದಿಲ್ಲ, ತಲೆಗೆ ಹೋಗುವುದಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಶುಕ್ರವಾರದಂದು ಬಿಜೆಪಿಯ ಶಾಸಕ ಅನಿಲ ಬೆನಕೆ (Anil Benake) ಅವರು ಬೆಳಗಾವಿಯ ಚವ್ಹಾಟ್ನಲ್ಲಿ ಎಮ್ಮೆ ಓಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಡಿಯೋ ನೋಡಿ. ಶಾಸಕರು ಮಾಸ್ಕ್ ಧರಿಸದೆ, ವೀರಾವೇಶದಿಂದ ಮರಾಠಿ ಭಾಷೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅವರ ಭಾಷಣ ಕೇಳುತ್ತಿದ್ದರೆ, ಇದು ಕರ್ನಾಟಕವಾ ಅಥವಾ ಮಹಾರಾಷ್ಟವಾ ಎಂಬ ಗೊಂದಲ ಮೂಡುತ್ತದೆ. ಸರಿ ಇನ್ನು ವೇದಿಕೆ ಮೇಲೆ ಕುಳಿತಿರುವ ಜನರನ್ನು ನೋಡಿ, ಅವರಲ್ಲಿ ಒಂದಿಬ್ಬರು ಮಾತ್ರ ಮಾಸ್ಕ್ ಧರಿಸಿದ್ದಾರೆ.

ಅದಾದ ಮೇಲೆ ಸ್ಫರ್ಧೆ ನಡೆಯುತ್ತಿರುವ ಸ್ಥಳವನ್ನೊಮ್ಮೆ ನೋಡಿ. ಜನ ಜಾತ್ರೆಯಂತೆ ನೆರೆದಿದ್ದಾರೆ. ಕೆಲವೇ ಕೆಲವು ಜನರ ಮುಖದ ಮೇಲೆ ಮಾಸ್ಕ್ ಕಾಣಿಸುತ್ತಿದೆ. ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮ ಇಲ್ಲಿ ಯಾರಿಗೂ ಗೊತ್ತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜನರಿಗೆ ಸೋಂಕಿನ ಬಗ್ಗೆ ಕಿಂಚಿತ್ತೂ ಭಯವಿದ್ದಂತಿಲ್ಲ.

ಬೇಜವಬ್ದಾರಿತನದ ಪರಮಾವಧಿ ಇದು. ಅವರು ಆರಿಸಿ ಕಳಿಸಿದ ಪ್ರತಿನಿಧಿಗೆ ಅದರ ಪರಿವೆ ಇಲ್ಲ ಅಂತಾದರೆ ಜನರಲ್ಲಿ ಅದು ಹೇಗೆ ಹುಟ್ಟೀತು, ಬಹಳ ಸರಳ ವಿಷಯವಿದು.

ಇದನ್ನೂ ಓದಿ:   ಸರಕು ಸಾಗಣೆ ರೈಲಿನಿಂದಲೇ ವಸ್ತುಗಳನ್ನು ಲೂಟಿ ಮಾಡುವ ಕಳ್ಳರು; ಕಸದ ತೊಟ್ಟಿಯಾದ ರೈಲ್ವೆ ನಿಲ್ದಾಣ! ವಿಡಿಯೋ ಇಲ್ಲಿದೆ