ನನ್ನನ್ನು ಹೊಡೆಸಲು ಕನಕಪುರದಿಂದ ರೌಡಿಗಳನ್ನು ಕರೆಸಿದ್ದಾರೆ; ಡಿಕೆಶಿ ವಿರುದ್ಧ ಮುನಿರತ್ನ ಆರೋಪ
ಮುನಿರತ್ನ

ನನ್ನನ್ನು ಹೊಡೆಸಲು ಕನಕಪುರದಿಂದ ರೌಡಿಗಳನ್ನು ಕರೆಸಿದ್ದಾರೆ; ಡಿಕೆಶಿ ವಿರುದ್ಧ ಮುನಿರತ್ನ ಆರೋಪ

Updated By: ಸುಷ್ಮಾ ಚಕ್ರೆ

Updated on: Oct 12, 2025 | 11:47 AM

ಆರ್​ಎಸ್​ಎಸ್​ ಡ್ರೆಸ್ ಧರಿಸಿ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ ಅವರನ್ನು ಪೊಲೀಸರು ಹೊರಗೆ ಕರೆದುಕೊಂಡು ಹೋದರು. ಈ ವೇಳೆ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಮುನಿರತ್ನ, ಸ್ಥಳೀಯ ಶಾಸಕನಾದ ನನಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕನೆಂಬುದನ್ನೂ ಲೆಕ್ಕಿಸದೆ ನನಗೆ ತುಳಿದಿದ್ದಾರೆ. ನನ್ನ ಮೇಲೆ ಸಚಿವರು ಕೈ ಎತ್ತಿ ಹೊಡೆಯುವ ಯತ್ನ ನಡೆಸಿದ್ದಾರೆ. ನನ್ನನ್ನು ಹೊಡೆಯಲು ಕನಕಪುರ, ಚನ್ನಪಟ್ಟಣದಿಂದ ಜನರನ್ನ ಕರೆತಂದಿದ್ದಾರೆ. ನನ್ನ ಮೇಲೆ ರೌಡಿಸಂ ನಡೆಸುತ್ತಿದ್ದಾರೆ, ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 12: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ವಾಯುವಿಹಾರಕ್ಕೆ ಬಂದಿದ್ದ ಜನರ ಜೊತೆ ಸಂವಾದ ನಡೆಸಿದರು. ಇದಾದ ನಂತರ ಅವರ ಸಮಸ್ಯೆಗಳನ್ನು ಆಲಿಸಿದರು. ಬೆಂಗಳೂರು ನಡಿಗೆ ಎಂಬ ಈ ಕಾರ್ಯಕ್ರಮಕ್ಕೆ ತನಗೆ ಆಹ್ವಾನ ನೀಡಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ (Munirathna) ಹೈಡ್ರಾಮಾ ಸೃಷ್ಟಿಸಿದರು. ಆರ್​ಎಸ್​ಎಸ್​ ಡ್ರೆಸ್ ಧರಿಸಿ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ನಡೆಸಿದ ಅವರನ್ನು ಪೊಲೀಸರು ಹೊರಗೆ ಕರೆದುಕೊಂಡು ಹೋದರು. ಈ ವೇಳೆ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಮುನಿರತ್ನ, ಸ್ಥಳೀಯ ಶಾಸಕನಾದ ನನಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕನೆಂಬುದನ್ನೂ ಲೆಕ್ಕಿಸದೆ ನನಗೆ ತುಳಿದಿದ್ದಾರೆ. ನನ್ನ ಮೇಲೆ ಸಚಿವರು ಕೈ ಎತ್ತಿ ಹೊಡೆಯುವ ಯತ್ನ ನಡೆಸಿದ್ದಾರೆ. ನನ್ನನ್ನು ಹೊಡೆಯಲು ಕನಕಪುರ, ಚನ್ನಪಟ್ಟಣದಿಂದ ಜನರನ್ನ ಕರೆತಂದಿದ್ದಾರೆ. ನನ್ನ ಮೇಲೆ ರೌಡಿಸಂ ನಡೆಸುತ್ತಿದ್ದಾರೆ, ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ