ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಬಿಡಗುಡೆ: ಕಾರಿನಲ್ಲಿ ಮನೆಗೆ ತೆರಳಿದ ಶಾಸಕ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 16, 2024 | 11:18 AM

ಅತ್ಯಾಚಾರ ಪ್ರಕರಣದಲ್ಲಿ ಬರೋಬ್ಬರಿ ಒಂದು ತಿಂಗಳ ಬಳಿಕ ಶಾಸಕ ಮುನಿರತ್ನಗೆ ಜಾಮೀನು ಸಿಕ್ಕಿದೆ. ಆ ಮೂಲಕ ಅವರಿಗೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡಗುಡೆ ಭಾಗ್ಯ ದೊರೆತಿದೆ. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕಾರಿನಲ್ಲಿ ತಮ್ಮ ಮನೆಯತ್ತ ತೆರಳಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಅಕ್ಟೋಬರ್​ 16: ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನಗೆ (Munirathna) ಜಾಮೀನು ಸಿಕ್ಕಿದ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡಗುಡೆ ಆಗಿದ್ದಾರೆ. ನಿನ್ನೆ ಜೈಲಧಿಕಾರಿಗಳಿಗೆ ಜಾಮೀನು ಪ್ರತಿ ತಡವಾಗಿ ತಲುಪಿತ್ತು. ಹೀಗಾಗಿ ನಿನ್ನೆ ಬಿಡುಗಡೆ ಆಗಿರಲಿಲ್ಲ. ಇಂದು ಬಿಡುಗಡೆಯಾಗುತ್ತಿದ್ದಂತೆ ಕಾರಿನಲ್ಲಿ ತಮ್ಮ ಮನೆಗೆ ಶಾಸಕ ಮುನಿರತ್ನ ತೆರಳಿದ್ದಾರೆ. ಸದ್ಯ ಮುನಿರತ್ನ ಬಿಡುಗಡೆ ಹಿನ್ನಲೆ ವೈಯಾಲಿಕಾವಲ್ ನಿವಾಸದ ಬಳಿ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 16, 2024 11:16 AM