AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session; ಕೆಪಿಟಿಸಿಎಲ್​ನಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದವರಿಗೆ 8 ವರ್ಷ ಕಳೆದರೂ ಪೋಸ್ಟಿಂಗ್ ಸಿಕ್ಕಿಲ್ಲ: ಶರಣು ಸಲಗರ

Karnataka Budget Session; ಕೆಪಿಟಿಸಿಎಲ್​ನಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದವರಿಗೆ 8 ವರ್ಷ ಕಳೆದರೂ ಪೋಸ್ಟಿಂಗ್ ಸಿಕ್ಕಿಲ್ಲ: ಶರಣು ಸಲಗರ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 10, 2025 | 8:21 PM

Share

ಹುದ್ದೆಗಳಿಗೆ ಆಯ್ಕೆಯಾದರೂ ಪೋಸ್ಟಿಂಗ್ ಆದೇಶ ಸಿಗದಿದ್ದರೆ ಏನೆಲ್ಲ ಕಷ್ಟ ಅನುಭವಿಸಬೇಕಾಗುತ್ತದೆ ಅನ್ನೋದನ್ನು ವೈಯಕ್ತಿಕ ಅನುಭವದಿಂದ ಬಲ್ಲೆ, ತನ್ನ ಪತ್ನಿ ತಹಸೀಲ್ದಾರ್ ಹುದ್ದೆಗೆ ಅಯ್ಕೆಯಾಗಿ ಆರ್ಡರ್ ಪಡದುಕೊಳ್ಳಲು ತಾನು 8 ವರ್ಷಗಳ ಕಾಲ ತಾನು ನಡೆಸಿದ ಅಲೆದಾಟ ಅನುಭವಿಸಿದ ನೋವುಗಳನ್ನು ಶಾಸಕ ಶರಣು ಸಲಗಾರ್ ಸದನದಲ್ಲಿ ಹೇಳಿಕೊಂಡರು.

ಬೆಂಗಳೂರು, ಮಾರ್ಚ್ 10: ಕರ್ನಾಟಕ ಪವರ್ ಕಾರ್ಪೋರೇಷನ್ (ಕೆಪಿಟಿಸಿಎಲ್) 2017ರಲ್ಲಿ ಸಹಾಯಕ ಅಭಿಯಂತರರು, ಜ್ಯೂನಿಯರ್ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯನ್ನು ಇಂದು ಸದನದಲ್ಲಿ ಪ್ರಸ್ತಾಪಿಸಿದ ಬಸನಕಲ್ಯಾಣ ಶಾಸಕ ಶರಣು ಸಲಗರ (Sharanu Salagar), 8 ವರ್ಷ ಕಳೆದರೂ ಆಯ್ಕೆಯಾವರಿಗೆ ಪೋಸ್ಟಿಂಗ್ ಆದೇಶ ನೀಡಿಲ್ಲ, ಇಂಧನ ಸಚಿವ ಕೆಜೆ ಜಾರ್ಜ್ ವಿಷಯದ ಕಡೆ ಗಮನಹರಿಸಿ, ಬಹಳ ದಯನೀಯ ಸ್ಥಿತಿಯಲ್ಲಿರುವವರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget Session; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದರೆ ಸಿಬಿಐ ತನಿಖೆ ಮಾಡುತ್ತದೆ: ಪರಮೇಶ್ವರ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.