Karnataka Budget Session: ಬ್ರಿಟಿಷರು ವಾಸವಾಗಿದ್ದ ದಂಡು ಪ್ರದೇಶದಲ್ಲಿ ಐಟಿ-ಬಿಟಿ ಉದ್ದಿಮೆ, ಶಾಲಾ-ಕಾಲೇಜು ಅಸ್ತಿತ್ವಕ್ಕೆ ಬಂದಿವೆ: ಮುನಿರತ್ನ
ಗ್ರೇಟರ್ ಬೆಂಗಳೂರು ಯೋಜನೆಯ ಭಾಗವಾಗಿರುವ ಟನೆಲ್ ರೋಡ್ ಮತ್ತು ಎಲಿವೇಟೆಡ್ ಕಾರಿಡಾರ್ ಬಗ್ಗೆ ಮಾತಾಡಿದ ಮುನಿರತ್ನ ಅವುಗಳ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಸರ್ಕಾರ ಮಾಡಿಕೊಂಡಿರುವ ತಯಾರಿಯನ್ನು ಗೇಲಿ ಮಾಡಿದರು. ಏತನ್ಮಧ್ಯೆ, ಸಚಿವ ರಾಮಲಿಂಗಾರೆಡ್ಡಿ, ಈಜಿಪುರ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ನಿಂತು ಹೋಗಿತ್ತು, ಈಗ ಪುನಃ ಅರಂಭಿಸಲಾಗಿದೆ ಎಂದರು.
ಬೆಂಗಳೂರು, ಮಾರ್ಚ್ 10: ವಿಧಾನಸಭಾ ಅಧಿವೇಶನದಲ್ಲಿ (Assembly session) ಇಂದು ಗ್ರೇಟರ್ ಬೆಂಗಳೂರು ಬಿಲ್ ಬಗ್ಗೆ ಮಾತಾಡಿದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು, ಬ್ರಿಟಿಷರ ಕಾಲದಲ್ಲಿ ಬೆಂಗಳೂರು-ದಂಡು ಪ್ರದೇಶ ಮತ್ತು ನಗರ ಎರಡು ಭಾಗಗಳಲ್ಲಿ ಗುರುತಿಸಿಕೊಳ್ಳುತಿತ್ತು, ದಂಡು ಪ್ರದೇಶದಲ್ಲಿ ಬ್ರಿಟಿಷರು ವಾಸವಾಗಿದ್ದರೆ ಪಶ್ಚಿಮ ಭಾಗದಲ್ಲಿ (ನಗರ) ಕೂಲಿ ಕಾರ್ಮಿಕರು ವಾಸವಾಗಿದ್ದರು. ದಂಡು ಪ್ರದೇಶದಲ್ಲಿ ಐಟಿ-ಬಿಟಿಗಳ ಉಗಮವಾದರೆ ಪಶ್ಚಿಮ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಬಿನ್ನಿ ಮಿಲ್, ರಾಜಾ ಮಿಲ್, ಕಿರ್ಲೋಸ್ಕರ್ ಮೊದಲದ ಕಂಪನಿಗಳು ಅಸ್ತಿತ್ವಕ್ಕೆ ಬಂದವು, ಹಾಗಾಗೇ, ನಗರ ಪ್ರದೇಶ ಈಗಲೂ ಬಡತನದಿಂದ ಕೂಡಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ವ್ಹೀಲ್ ಚೇರಲ್ಲೇ ವಿಧಾನಸಭೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಿಂದ ಸ್ವಾಗತ