Karnataka Budget Session: ವ್ಹೀಲ್ ಚೇರಲ್ಲೇ ವಿಧಾನಸಭೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಿಂದ ಸ್ವಾಗತ
Karnataka Budget Session: ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಹೀಲ್ ಚೇರ್ ನಲ್ಲಿ ಕುಳಿತೇ ಬ್ಯಾಂಕ್ವೆಟ್ ಹಾಲ್ ಪ್ರವೇಶಿಸಿದಾಗ ಅಲ್ಲಿದ್ದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಶಾಸಕರಾದ ಅರವಿಂದ್ ಬೆಲ್ಲದ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿ ಸುರೇಶ್ ಗೌಡ, ಎ ಮಂಜು ಮೊದಲಾದವರು ಬರಮಾಡಿಕೊಳ್ಳುತ್ತಾರೆ. ಹಾಲ್ ಒಳಗಡೆ ಹೋದ ಬಳಿಕ ಸಿದ್ದರಾಮಯ್ಯ ನಿಧಾನಕ್ಕೆ ವ್ಹೀಲ್ ಚೇರ್ನಿಂದ ಎದ್ದು ನಡೆಯುತ್ತಾರೆ.
ಬೆಂಗಳೂರು, ಮಾರ್ಚ್6 : ಯಾರೇನೇ ಹೇಳಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗತ್ತಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಇವತ್ತು ಮಧ್ಯಾಹ್ನದ ನಂತರ ಅವರು ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ವ್ಹೀಲ್ ಚೇರಲ್ಲಿ ಆಗಮಿಸಿದರು. ನಾಳೆ ಅವರು ದಾಖಲೆಯ 16 ನೇ ಬಾರಿಗೆ ಬಜೆಟ್ ಮಂಡಿಸಲಿದ್ದು ಅದಕ್ಕೆ ಫೈನಲ್ ಟಚಸ್ (final touches) ನೀಡಲು ಪ್ರಾಯಶಃ ತಮ್ಮ ಹಣಕಾಸು ಸಚಿವಾಲಯದ ತಂಡದೊಂದಿಗಿದ್ದರು. ಅವರ ಸರಾಗ ಓಡಾಟಕ್ಕೆ ವಿಧಾನ ಸಭೆಯ ಪ್ರವೇಶ ದ್ವಾರಗಳಲ್ಲಿ ರ‍್ಯಾಂಪ್ ಗಳನ್ನು ಅಳವಡಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೊಯ್ಲಿ ಅಥವಾ ಮತ್ಯಾರೋ ಹೇಳಿದರೆ ಯಾರೂ ಸಿಎಂ ಅಗಲ್ಲ, ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ