ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಗೆ ತಂದು ಶಿವಕುಮಾರ್ ಹೆಸರು ಕೆಡಿಸಿಕೊಳ್ಳುವುದು ಬೇಡ: ಎಸ್ ಎಸ್ ವಿಶ್ವನಾಥ್
ಶಿವಕುಮಾರ್ ಮಾತುಗಳಿಗೆ ಒಪ್ಪದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಗ್ರೇಟರ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ವಿಭಜಿಸುವುದು ಸರಿಯಲ್ಲ, ಕೇಂದ್ರ ಸರ್ಕಾರದ ಡಿಲಿಮಿಟೇಷನ್ ಯೋಜನೆ ಜಾರಿಗೊಂಡರೆ ಬಹಳ ಕಷ್ಟವಾಗುತ್ತದೆ, ಹಾಗಾಗಿ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಗೊಳಿಸಿ ಹೆಸರು ಕೆಡಿಸಿಕೊಳ್ಳುವುದು ಬೇಡ ಎಂದರು.
ಬೆಂಗಳೂರು, ಮಾರ್ಚ್ 10: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ (Greater Bengaluru Bill) ಸಂಬಂಧಿಸಿದಂತೆ ಸದನದಲ್ಲಿ ಮುಂದುವರಿದ ಚರ್ಚೆಯಲ್ಲಿ ಡಿಕೆ ಶಿವಕುಮಾರ್, ಬೆಂಗಳೂರನ್ನು ವಿಭಜನೆ ಮಾಡಿದ ಕಾರಣ ವಿವರಿಸಿದರು. ಹಿಂದೆ ಕೇವಲ ಬೆಂಗಳೂರು ಮಾತ್ರ ಇತ್ತು ಮತ್ತು ತಾನು ಬೆಂಗಳೂರು ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ; ಆದರೆ, ನಂತರದ ದಿನಗಳಲ್ಲಿ 73 ಮತ್ತು 74 ನೇ ತಿದ್ದುಪಡಿ ಜಾರಿಗೆ ಬಂದು ಆಡಳಿತಾತ್ಮಕವಾಗಿ ವ್ಯವಸ್ಥೆ ಸುರಳೀತಗೊಳಿಸಲು ಬೆಂಗಳೂರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರಗಳಾಗಿ ವಿಂಗಡಿಸಲಾಯಿತು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣ ರಾಜಕೀಯ ಪ್ರೇರಿತ ಅಂತ ಮೊದಲೇ ಹೇಳಿದ್ದೆ, ನ್ಯಾಯಾಲಯ ಹೇಳಿದ್ದನ್ನು ಪಾಲಿಸುತ್ತೇವೆ: ಶಿವಕುಮಾರ್
Latest Videos