Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಕುಮಾರ್ ಮುಖವಾಡ ಧರಿಸಿದ್ದ ವ್ಯಕ್ತಿಗೆ ಕೈಮುಗಿದು ಸ್ವಾಮಿ ನನ್ನನ್ನು ಜೈಲಿಗೆ ಕಳಿಸ್ಬೇಡಿ ಎಂದ ಶಾಸಕ ಮುನಿರತ್ನ

ಶಿವಕುಮಾರ್ ಮುಖವಾಡ ಧರಿಸಿದ್ದ ವ್ಯಕ್ತಿಗೆ ಕೈಮುಗಿದು ಸ್ವಾಮಿ ನನ್ನನ್ನು ಜೈಲಿಗೆ ಕಳಿಸ್ಬೇಡಿ ಎಂದ ಶಾಸಕ ಮುನಿರತ್ನ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2025 | 2:30 PM

ತಮ್ಮ ವಿರುದ್ಧ ರೇಪ್ ಮತ್ತು ಅಟ್ರಾಸಿಟಿ ಪ್ರಕರಣಗಳು ದಾಖಲಾದ ಹಿಂದೆ ಶಿವಕುಮಾರ್ ಕೈವಾಡವಿದೆ ಎಂದು ಮುನಿರತ್ನ ನೇರವಾಗಿ ಅರೋಪ ಮಾಡುತ್ತಾರೆ. ತಮ್ಮ ಬಲಭಾಗದಲ್ಲಿರುವ ವ್ಯಕ್ತಿಯ ಕಡೆ ತಿರುಗಿ ಸ್ವಾಮಿ ನಿಮ್ಮನ್ನು ನೋಡಲೂ ನನಗೆ ಭಯವಾಗುತ್ತಿದೆ, ನನ್ನ ವಿರುದ್ಧ ಅತ್ಯಾಚಾರದ ಕೇಸ್ ಹಾಕ್ಬೇಡಿ, ಮತ್ತೊಂದು ಸಲ ಜೈಲಿಗೆ ಕಳಿಸುವ ಪ್ರಯತ್ನ ಮಾಡಬೇಡಿ ಅಂತ ಅವರು ಹೇಳುತ್ತಾರೆ.

ಬೆಂಗಳೂರು, ಮಾರ್ಚ್ 5: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ (guarantee schemes) ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಬಿಜೆಪಿ ಶಾಸಕರು ಇಂದು ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತಾಡಿದ ಮುನಿರತ್ನ ತಮ್ಮ ಎಡಬಲದಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಮುಖವಾಡಗಳನ್ನು ಧರಿಸಿದ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿಕೊಂಡಿದ್ದರು. ಶಿವಕುಮಾರ್ ಮುಖವಾಡ ಧರಿಸಿದ ವ್ಯಕ್ತಿಯ ಕುತ್ತಿಗೆಯಲ್ಲಿ ನಾಮಿನೇಷನ್ ಕುಮಾರ್ ಅಂತ ಪ್ಲಕಾರ್ಡ್ ಜೋತಾಡುತ್ತಿದ್ದರೆ ಮತ್ತೊಂದು ವ್ಯಕ್ತಿಯ ಕುತ್ತಿಗೆಯಿಂದ ಲೂಟಿ ರಾಮಯ್ಯ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರು ಅಭಿವೃದ್ಧಿ ಸಚಿವರನ್ನು ಬದಲಾಯಿಸಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಮುನಿರತ್ನ ಪತ್ರ