ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಮತ್ತು ಮುನಿರತ್ನ ಜೊತೆಗಿದ್ದರೂ ಪರಸ್ಪರ ಮುಖ ನೋಡಿಕೊಳ್ಳಲಿಲ್ಲ
ಹಿಂದೆ ಮುನಿರತ್ನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಡಿಕೆ ಸಹೋದರರ ಜೊತೆ ಉತ್ತಮ ರ‍್ಯಾಪೋ ಇಟ್ಟುಕೊಂಡಿದ್ದರು. ಅವರು ಬಿಜೆಪಿ ಸೇರಿದ ಮೇಲೆ ಸಮೀಕರಣ ಬದಲಾಗಿದೆ. ರಾಜರಾಜೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಮುನಿರತ್ನ ಉಪ ಮುಖ್ಯಮಂತ್ರಿಯನ್ನು ದೂರುತ್ತಾರೆ. ಇವತ್ತು ನಡೆದ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಮುಖ ನೋಡಿಕೊಳ್ಳಲಿಲ್ಲ.
ಬೆಂಗಳೂರು, ಮಾರ್ಚ್ 4: ಜ್ಞಾನಭಾರತಿ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಇವತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ವಿವಿಯ ಶೈಕ್ಷಣಿಕ ಮತ್ತು ಸಂಶೋಧನಾ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಮತ್ತು ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu ) ಹಾಜರಿದ್ದರು. ಮುನಿರತ್ನ ಮತ್ತು ಶಿವಕುಮಾರ್ ನಡುವೆ ಕಳೆದ ಕೆಲ ತಿಂಗಳುಗಳಿಂದ ಬಾಂಧವ್ಯ ಸರಿ ಇಲ್ಲ. ಮುನಿರತ್ನ ಪರೋಕ್ಷವಾಗಿ ಶಿವಕುಮಾರ್ ಮತ್ತು ಡಿಕೆ ಸುರೇಶ್ ರನ್ನು ಟಾರ್ಗೆಟ್ ಮಾಡಿದರೆ ಡಿಕೆ ಸಹೋದರರು ನೇರವಾಗಿ ವಾಗ್ದಾಳಿ ನಡೆಸುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಕುಮಾರ್ ವೇದಿಕೆ ದುರ್ಬಳಕೆ ಮಾಡಿಕೊಂಡು ಕೆಟ್ಟ ಭಾಷೆ ಬಳಸಿದ್ದಾರೆ: ಎಸ್ ವಿ ರಾಜೇಂದ್ರ ಸಿಂಗ್, ನಿರ್ದೇಶಕ
Latest Videos