Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದರೆ ಸಿಬಿಐ ತನಿಖೆ ಮಾಡುತ್ತದೆ: ಪರಮೇಶ್ವರ್

Karnataka Budget Session; ರನ್ಯಾ ರಾವ್ ಪ್ರಕರಣದಲ್ಲಿ ಸಚಿವರು ಶಾಮೀಲಾಗಿದ್ದರೆ ಸಿಬಿಐ ತನಿಖೆ ಮಾಡುತ್ತದೆ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 10, 2025 | 1:29 PM

ಅವರ ಉತ್ತರಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಸುನೀಲ ಕುಮಾರ, ರಾಜ್ಯ ಸರ್ಕಾರವ್ಯಾಕೆ ರನ್ಯಾ ರಾವ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬಾರದು? ಪೊಲೀಸ್ ಅಧಿಕಾರಿಯಾಗಿರುವ ನಟಿಯ ತಂದೆಗೆ ರಕ್ಷಣೆ ನೀಡೋದು ಸರಿ, ಆದರೆ ರನ್ಯಾ ಅವರಿಗ್ಯಾಕೆ ಪ್ರೋಟೋಕಾಲ್ ವಿಸ್ತರಿಸಲಾಗುತ್ತಿದೆ, ಪೊಲೀಸ್ ವಾಹನಗಳನ್ನು ಯಾಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಬೆಂಗಳೂರು, ಮಾರ್ಚ್ 10: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ಕನ್ನಡಿಗರು ಅಂದುಕೊಳ್ಳುವಷ್ಟು ಸುಲಭವಾಗಿಲ್ಲ. ಪ್ರಕರಣವುಯ ಸದನದಲ್ಲಿ ಚರ್ಚೆಗೆ ಬಂದಾಗ ಉತ್ತರ ನೀಡಿದ ಗೃಹಸಚಿವ ಜಿ ಪರಮೇಶ್ವರ್ ರನ್ಯಾರಾವ್ ಪ್ರಕರಣ ಮತ್ತು ರಾಜ್ಯ ಪೊಲೀಸ್ ನಡುವೆ ಸಂಬಂಧವೇ ಇಲ್ಲವೆಂದು ಹೇಳಿದರು. ನಟಿಯನ್ನು ಆದಾಯ ಗುಪ್ತಚರ ನಿರ್ದೇನಾಲಯದವರು ಬಂಧಿಸಿದ್ದಾರೆ ಮತ್ತು ಸಿಬಿಐ ತನಿಖೆಗೂ ಅವರೇ ನೀಡಿದ್ದಾರೆ, ರಾಜ್ಯದ ಇಬ್ಬರ ಸಚಿವರ ಇನ್ವಾಲ್ವ್​ಮೆಂಟ್ ಇದ್ದರೆ ಅದನ್ನೂ ಸಿಬಿಐ ಬಯಲಿಗೆಳೆಯುತ್ತಯದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget Session: ರಾಜ್ಯದಲ್ಲಿ ಜೈನ್ ಸಮುದಾಯದವರು 20 ಲಕ್ಷಕ್ಕೂ ಹೆಚ್ಚಿದ್ದಾರೆ, ಅವರಿಗೊಂದು ನಿಗಮ ಬೇಕು: ಜಮೀರ್ ಅಹ್ಮದ್