Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸಚಿವರೊಂದಿಗೆ ನಗರಕ್ಕೆ ಆಗಮಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸಚಿವರೊಂದಿಗೆ ನಗರಕ್ಕೆ ಆಗಮಿಸಿದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jan 21, 2025 | 10:50 AM

ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸೋಮಶೇಖರ್, ರಾಜಣ್ಣ ಮತ್ತು ಖೇಣಿ ಒಟ್ಟಿಗೆ ಬರುತ್ತಾರಾದರೂ ಏರ್ಪೋರ್ಟ್​ನಿಂದ ಬೇರೆ ಬೇರೆ ದಿಕ್ಕಿನೆಡೆ ಹೋಗುತ್ತಾರೆ. ಕನ್ನಡಿಗರಿಗೆ ಗೊತ್ತಿರುವಂತೆ ಸೋಮಶೇಖರ್ ಕಾಂಗ್ರೆಸ್ ಸೇರುವ ವದಂತಿಗಳು ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಹರಿದಾಡುತ್ತಿವೆ. ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅವರ ಮೇಲೆ ಇದುವರೆಗೆ ಕ್ರಮ ಜರುಗಿಲ್ಲ.

ಬೆಳಗಾವಿ: ಈಚಲು ಮರದ ಕೆಳಗೆ ಕೂತು ಮಜ್ಜಿಗೆ ಕುಡಿದರೂ ನೋಡಿದವರು ಅದನ್ನು ಹೆಂಡವೇ ಅನ್ನುತ್ತಾರಂತೆ. ಹಾಗಿದೆ ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಸ್ಥಿತಿ. ಇವತ್ತು ಬೆಳಗಾವಿಯಲ್ಲಿ ಗಾಂಧಿ ಭಾರತ ಸಮವೇಶ ನಡೆಯಲಿದೆ ಮತ್ತು ಅದರಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಕಾಂಗ್ರೆಸ್ ಮುಖಂಡರೆಲ್ಲ ಭಾಗಿಯಾಗುತ್ತಿದ್ದಾರೆ. ಬೆಳಗ್ಗೆ ಸಚಿವರಾದ  ಕೆಎನ್ ರಾಜಣ್ಣ ಮತ್ತು ಅಶೋಕ್ ಖೇಣಿ ಅವರೊಂದಿಗೆ ಸೋಮಶೇಖರ್ ಸಹ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಸಮಾವೇಶದಲ್ಲಿ ಭಾಗಿಯಾಗಲು ಅವರು ಬಂದಿದ್ದಾರೆಯೇ? ಕಾದು ನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಗೈರು: ಪತ್ರದ ಮೂಲಕ ಸೋನಿಯಾ ಮಹತ್ವದ ಕರೆ    

Published on: Jan 21, 2025 10:44 AM