Loading video

ಮುಸ್ಲಿಂ ಮೀಸಲಾತಿ ವಿಧೇಯಕ ಪಾಸು ಮಾಡಿಕೊಳ್ಳಲು ಬಿಜೆಪಿಯ 18 ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ: ಯತ್ನಾಳ್

|

Updated on: Mar 21, 2025 | 7:52 PM

ಇವತ್ತು ಸದನದಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಾಗಿದೆ, ಚೀಟಿ ವಿಷಯದ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಬಸನಗೌಡ ಯತ್ನಾಳ್, ಸರಕಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರಿಯುತ್ತದೆ, ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ವಿರೋಧ ಪಕ್ಷದ ನಾಯಕ ಅಶೋಕ ಸಭೆಯೊಂದನ್ನು ಕರೆದಿದ್ದಾರೆ, ಅದರಲ್ಲಿ ಭಾಗವಹಿಸಲು ಹೋಗುತ್ತಿರುವುದಾಗಿ ಹೇಳಿದರು.

ಬೆಂಗಳೂರು, ಮಾರ್ಚ್ 21: ವಿಧಾನ ಸಭೆಯಿಂದ ಹೊರಬರುವಾಗ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಶೇಕಡ 4ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು ಸರ್ಕಾರ ಸದನದಲ್ಲಿ ಪಾಸು ಮಾಡಿಕೊಂಡಿದೆ, ಇದನ್ನು ತಮ್ಮ ಪಕ್ಷ ಹೈಕೋರ್ಟ್​​​ನಲ್ಲಿ ಪ್ರಶ್ನಿಸಲಿದೆ ಎಂದು ಹೇಳಿದರು. 18 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡುವ ಹಿಂದಿನ ಉದ್ದೇಶ ಮಸೂದೆಯನ್ನು ಪಾಸು ಮಾಡುವುದಾಗಿತ್ತು, ಯಾಕೆಂದರೆ ಹಲವಾರು ಕಾಂಗ್ರೆಸ್ ಶಾಸಕರು ಇವತ್ತು ಸದನಕ್ಕೆ ಬಂದಿರಲಿಲ್ಲ ಎಂದು ಬಸನಗೌಡ ಯತ್ನಾಳ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget Session: ರಾಯರೆಡ್ಡಿ ಮತ್ತು ಯತ್ನಾಳ್ ಮಾತಿನ ಜಗಳದ ನಡುವೆ ಜೋಕ್ ಕಟ್ ಮಾಡಿ ಎಲ್ಲರನ್ನೂ ನಗಿಸಿದ ಸುರೇಶ್ ಕುಮಾರ್

Published on: Mar 21, 2025 07:03 PM