ಮದರಸಾಗಳಲ್ಲಿ ದೇಶ ವಿರೋಧಿ ಚಟುವಟಿಕೆ ಹೇಳಿಕೊಡಲಾಗುತ್ತದೆ ಅಂತ ಯತ್ನಾಳ್ ಹೇಳಿದಾಗ ಸದನದಲ್ಲಿ ಗಲಾಟೆ
ರಿಜ್ವಾನ್ ಅರ್ಷದ್ ಮಾತಾಡವಾಗ ಯತ್ನಾಳ್ರನ್ನು ದೇಶ ವಿರೋಧಿ, ದೇಶ ದ್ರೋಹಿ ಅಂತೆಲ್ಲ ಕರೆಯುತ್ತಾರೆ. ಯತ್ನಾಳ್ ಮಾತಾಡುವುದು ಕೇಳಿಸಲ್ಲ. ಎಂಬಿ ಪಾಟೀಲ್ ಮಾತಾಡುವುದು ಸಹ ಕೇಳಿಸಲ್ಲ, ಏತನ್ಮಧ್ಯೆ ಕಾಂಗ್ರೆಸ್ ಸದಸ್ಯರೊಬ್ಬರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮಾತುಗಳನ್ನಾಡಿರುವ ಯತ್ನಾಳ್ ಅವರನ್ನು ಸದನದಿಂದ ಸಸ್ಪೆಂಡ್ ಮಾಡಿ ಎಂದು ಹೇಳುತ್ತಾರೆ.
ಬೆಂಗಳೂರು, ಮಾರ್ಚ್ 20: ಸದನದಲ್ಲಿ ಬಜೆಟ್ ಮೇಲೆ ಮಾತಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಲ್ಪಸಂಖ್ಯಾತರಿಗೆ ನೀಡಿದ ಅನುದಾನದ ಬಗ್ಗೆ ಹೇಳುತ್ತಾ, ಮದರಸಾಗಳಲ್ಲಿ ಧಾರ್ಮಿಕ ವಿಷಯವನ್ನಲ್ಲದೆ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಹೇಳಿಕೊಡಲಾಗುತ್ತದೆ ಎಂದಾಗ ಸದನದಲ್ಲಿ ಕೋಲಾಹಲವೆದ್ದಿತು. ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಎದ್ದು ನಿಂತು, ಏನು ಮಾತಾಡ್ತಾ ಇದ್ದೀರ ಸ್ವಾಮಿ ನೀವು? ಸದನದ ಹಿರಿಯರಲ್ಲಿ ಒಬ್ಬರಾಗಿರುವ ನೀವು ಸಮಾಜದ ಸಾಮರಸ್ಯ ಕದಡುವ ಮಾತಾಡಬಾರದು ಎನ್ನುತ್ತಾರೆ. ಯತ್ನಾಳ್ ಅದೇ ಧಾಟಿಯಲ್ಲಿ ಮುಂದುವರಿಸಿದಾಗ ಸಚಿವ ಎಂಬಿ ಪಾಟೀಲ್ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಅವರ ಮೇಲೆ ಮುಗಿ ಬೀಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session; ಕಾಂಗ್ರೆಸ್ ಸರ್ಕಾರಕ್ಕೆ ಸಮಾನತೆ ಹೇಳಲಷ್ಟೇ ಬೇಕು, ಕಾರ್ಯರೂಪದಲ್ಲಿ ತರಲಲ್ಲ: ಧೀರಜ್ ಮುನಿರಾಜ್