Karnataka Budget Session; ಅತ್ಯಾಚಾರದ ಸುಳ್ಳು ಆರೋಪ ಹೊರೆಸಿ ನನ್ನ ಬದುಕನ್ನೇ ಹಾಳು ಮಾಡಲಾಯಿತು: ಮುನಿರತ್ನ
ನೀವು ಯಾರ ಮೇಲೆ ಆಪಾದನೆ ಮಾಡುತ್ತಿದ್ದೀರಿ, ಅದನ್ನಾದರೂ ಹೇಳಿ ಅಂತ ಬಾಲಕೃಷ್ಣ ಹೇಳುತ್ತಾರೆ. ಮುನಿರತ್ನ ಮುಂದೆ ಕೂತಿದ್ದ ಸುನೀಲ ಕುಮಾರ್ ಸುಮ್ಮನಿರಿ ಅಂತ ಸನ್ನೆ ಮಾಡಿದರೂ ಆರ್ ಆರ್ ನಗರ ಶಾಸಕ ಸುಮ್ಮನಾಗಲ್ಲ. ನೀವು ಹೇಳುತ್ತಿರುವ ಪ್ರಕರಣ ನ್ಯಾಯಾಲಯಲ್ಲಿದೆ, ಮಾತಾಡುವುದು ಸರಿಯಲ್ಲ ಎಂದು ಖಾದರ್ ಮತ್ತು ಬಾಲಕೃಷ್ಣ ಹೇಳುತ್ತಾರೆ.
ಬೆಂಗಳೂರು, ಮಾರ್ಚ್ 20: ಹನಿ ಟ್ರ್ಯಾಪಿಂಗ್ ವಿಷಯದಲ್ಲಿ ಇಂದು ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ರೊಚ್ಚಿಗೆದ್ದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು, ರೋಷಾವೇಷದಿಂದ ಕೂಗಾಡಿದರು. ಐದು ವರ್ಷದ ಹಿಂದೆ ತನ್ನನ್ನು ಸುಳ್ಳು ಅತ್ಯಾಚಾರದ ಅರೋಪದಲ್ಲಿ ಸಿಕ್ಕಿಸಿ ಬದುಕನ್ನೇ ಹಾಳು ಮಾಡಲಾಯಿತು ಅಂತ ಹೇಳುತ್ತಾ ಮುಂದೆ ಏನೇನೋ ಹೇಳುತ್ತಾರೆ. ಅದರೆ ಸ್ಪೀಕರ್ ಯುಟಿ ಖಾದರ್, ಶಾಸಕರಾದ ಹೆಚ್ ಸಿ ಬಾಲಕೃಷ್ಣ ಮತ್ತು ಮಂಜುನಾಥ್ ಒಟ್ಟಿಗೆ ಮಾತಾಡುತ್ತಿದ್ದರಿಂದ ಮುನಿರತ್ನ ಹೇಳೋದು ಕೇಳಿಸಲ್ಲ. ನೀವು ಕೂತ್ಕೊಳ್ಳಿ ಅಂತ ಸ್ಪೀಕರ್ ಹೇಳಿದರೂ, ಹೆಚ್ ಡಿ ರೇವಣ್ಣನನ್ನು ಬದುಕನ್ನು ಹಾಳು ಮಾಡಿದರು, ಅವರ ಮಗನನ್ನ ಜೈಲಿಗೆ ಹಾಕಿಸಿದರು ಎಂದ ಮುನಿರತ್ನ ಹೇಳುವುದು ಕೇಳಿಸುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿವಕುಮಾರ್ ಮುಖವಾಡ ಧರಿಸಿದ್ದ ವ್ಯಕ್ತಿಗೆ ಕೈಮುಗಿದು ಸ್ವಾಮಿ ನನ್ನನ್ನು ಜೈಲಿಗೆ ಕಳಿಸ್ಬೇಡಿ ಎಂದ ಶಾಸಕ ಮುನಿರತ್ನ