ಮೊಟ್ಟೆ ದಾಳಿ ಬೆನ್ನಲ್ಲೇ ಮುನಿರತ್ನ ಆಸ್ಪತ್ರೆಗೆ ದಾಖಲು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ದಾಳಿಯಾಗಿದೆ. ನಂದಿನಿ ಲೇಔಟ್ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುತ್ತಿದ್ದ ವೇಲೆ ಕಿಡಿಗೇಡಿಗಳು ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿದ್ದು, ಅದು ನೇರವಾಗಿ ತಲೆಗೆ ಬಿದ್ದಿದೆ. ಇನ್ನು ಮೇಲ್ ನೋಟಕ್ಕೆ ಇದು ಆ್ಯಸಿಡ್ ಮಾದರಿಯ ದ್ರವ್ಯದ ಬಗ್ಗೆ ಮಾಹಿತಿ ಇದ್ದು, ಸದ್ಯ ಮುನಿರತ್ನ ಅವರು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು, (ಡಿಸೆಂಬರ್ 25): ಮೊಟ್ಟೆ ದಾಳಿ ಹಿನ್ನೆಲೆಯಲ್ಲಿ ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆ ವೈದ್ಯೆ ಪಂಕಜಾ ಅವರು ಮುನಿರತ್ನ ಅವರಿಗೆ ಎರಡು ಗಂಟೆ ವರೆಗೆ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಮುನಿರತ್ನ ಆರೋಗ್ಯ ವಿಚಾರಿಸಲು ಬಿಜೆಪಿ ನಾಯಕರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಸಂಸದ ಡಾ ಮಂಜುನಾಥ್ ಸಹ ಆಸ್ಪತ್ರೆಗೆ ಭೇಟಿ ನೀಡಿ ಮುನಿರತ್ನ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ ನಾಯ್ಡು ತಲೆ ಹಿಂಭಾಗಕ್ಕೆ ಪೆಟ್ಟು ಬಿದ್ದಿದೆ. ಕೆಮಿಕಲ್ ಮಾದರಿಯ ಪದಾರ್ಥದಿಂದ ಅವರಿಗೆ ಹೊಡೆದಿದ್ದಾರೆ. ಇದರಿಂದ ತಲೆ ಸುತ್ತು, ವಾಂತಿ ಬಂದಂತೆ ಆಗುತ್ತಿದೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊಟ್ಟೆ ದಾಳಿಯಿಂದ ಮುನಿರತ್ನ ಕೂದಲು ಸ್ವಲ್ಪ ಬರ್ನ್ ಆಗಿದೆ. ಹಲವು ತಿಂಗಳಿಂದ ಕೆಲವು ರಾಜಕೀಯ ಘಟನೆಗಳನ್ನು ನೋಡಿದ್ರೆ ಮುನಿರತ್ನ ನಾಯ್ಡುಗೆ ಟಾರ್ಗೆಟ್ ಮಾಡುತ್ತಿದ್ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದರು.