ಬಿಜೆಪಿ ಕಾರ್ಯಕರ್ತೆಯರು ಕಾಂಗ್ರೆಸ್ ಶಾಲು ಹೊದ್ದು ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿದ್ದರು: ಪರಮೇಶ್ವರ್

Updated on: Apr 29, 2025 | 11:38 AM

ಪಹಲ್ಗಾಮ್ ನಲ್ಲಿ ಭದ್ರತಾ ಲೋಪ ಜರುಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಕಣ್ಣೆದುರೇ ಇಂಥದೊಂದು ಲೋಪ ಜರಿಗಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಕೇಳಿದ್ದಕ್ಕೆ ಪರಮೇಶ್ವರ್, ಬಿಜೆಪಿ ಕಾರ್ಯಕರ್ತೆಯರು ಕಾಂಗ್ರೆಸ್ ಶಾಲನ್ನು ಧರಿಸಿ ಬಂದರೆ ಅದನ್ನು ಹೇಗೆ ಪತ್ತೆ ಮಾಡಲಾದೀತು? ಅವರು ಬಿಜೆಪಿ ಶಾಲು ಧರಿಸಿ ಬಂದಿದ್ದರೆ ಭದ್ರತಾ ವೈಫಲ್ಯ ಗೊತ್ತಾಗುತಿತ್ತು ಎಂದರು.

ಬೆಂಗಳೂರು, ಏಪ್ರಿಲ್ 29: ನಿನ್ನೆ ಬೆಳಗಾವಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಪೊಲೀಸ್ ಅಧಿಕಾರಿಯ ಮೇಲೆ ಯಾಕೆ ಸಂಯಮ ಕಳೆದುಕೊಂಡರೆಂಬ ಸಂಪೂರ್ಣ ಮಾಹಿತಿ ತನಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ತಮಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿ ಮಹಿಳಾ ಮೋರ್ಚಾದ 6 ಸದಸ್ಯರು ಕಾಂಗ್ರೆಸ್ ಪಕ್ಷದ ಶಾಲು ಹೊದ್ದು ಸಭೆ ನಡೆಯುತ್ತಿದ್ದ ಸ್ಥಳವನ್ನು ಪ್ರವೇಶಿಸಿದ್ದಾರೆ. ಬೇರೆಯವರು ಭಾಷಣ ಮಾಡುತ್ತಿದ್ದಾಗ ಸುಮ್ಮನಿದ್ದ ಅವರು ಸಿದ್ದರಾಮಯ್ಯ ಭಾಷಣ ಮಾಡಲು ಬಂದಾಗ ಎದ್ದುನಿಂತು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ, ಇದರಿಂದ ಮುಖ್ಯಮಂತ್ರಿ ಸಂಯಮ ಕಳೆದುಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:   ಪಹಲ್​ಗಾಮ್ ದಾಳಿ: ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ