ನಾಳಿನ ಆರ್ ಸಿಬಿ-ಸಿಎಸ್ ಕೆ ನಡುವಿನ ಪಂದ್ಯಕ್ಕೆ ಕಾಳಸಂತೆಕೋರರ ಹಾವಳಿ, ₹3,000 ಟಿಕೆಟ್ ಗೆ ₹ 20,000 ಅಂತೆ!
ಯಾದಗಿರಿಯಿಂದ ಬಂದಿರುವ ಯುವಕ ರೂ. 3,000 ಮುಖಬೆಲೆಯ ಟಿಕೆಟ್ ಗೆ ರೂ. 8,000 ಕೊಡಲು ತಯಾರಿದ್ದಾನೆ! ಆದರೆ, ಕಾಳಸಂತೆಕೋರರನ್ನು ತಡೆಯುವುದು ಸಾಧ್ಯವಿಲ್ಲವೇ? ಪೊಲೀಸರಿಗೆ ಗೊತ್ತಿದ್ದೂ ಸುಮ್ಮನಿದ್ದಾರೆಯೇ? ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಿಗೆ ಹೊರಗೇನು ನಡಯುತ್ತಿದೆ ಅಂತ ಗೊತ್ತಿಲ್ಲವೇ? ವೇಕ್ ಅಪ್ ಮೆನ್, ದಿಸ್ ಈಸ್ ಕ್ರಿಕೆಟ್, ನಾಟ್ ಗ್ಯಾಂಬ್ಲಿಂಗ್!
ಬೆಂಗಳೂರು: ಇದಪ್ಪಾ ಕ್ರಿಕೆಟ್, ಆರ್ ಸಿಬಿ (RCB) ಮತ್ತು ವಿರಾಟ್ ಕೊಹ್ಲಿಯ (Virat Kohli) ಕ್ರೇಜ್ ಅಂದ್ರೆ! ನಾಲೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಸಿಎಸ್ ಕೆ ವಿರುದ್ಧ ನಡೆಯಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದರೂ ಪ್ಲೇಆಫ್ ಹಂತಕ್ಕೇರುವುದು ಕಷ್ಟ ಯಾಕೆಂದರೆ ಸಿಎಸ್ ಕೆ ತಂಡದ ರನ್ ರೇಟ್ ಬೆಂಗಳೂರು ತಂಡಕ್ಕಿಂತ ಬಹಳ ಚೆನ್ನಾಗಿದೆ. ನಾಳಿನ ಪಂದ್ಯವನ್ನು ನೋಡಲೇಬೇಕೆಂದು ಅರ್ ಸಿಬಿ ಅಭಿಮಾನಿಗಳು ಸ್ಟೇಡಿಯಂ ಮುಂದೆ ನೆರೆದಿರುವರಾದರೂ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಗಳನ್ನು ಬ್ಲ್ಯಾಕ್ ನಲ್ಲಿ ಮಾರಲಾಗುತ್ತಿದೆ ಎಂದು ಇವರೆಲ್ಲ ಹೇಳುತ್ತಾರೆ. ರೂ 3,000 ಟಿಕೆಟ್ ಗೆ 15 ರಿಂದ 20,000 ಸಾವಿರ ರೂ ಯಂತೆ, 1,250 ರೂ. ಬೆಲೆಯ ಟಿಕೆಟ್ 10,000 ರೂ. ಯಂತೆ! ಯಾದಗಿರಿಯಿಂದ ಬಂದಿರುವ ಯುವಕ ರೂ. 3,000 ಮುಖಬೆಲೆಯ ಟಿಕೆಟ್ ಗೆ ರೂ. 8,000 ಕೊಡಲು ತಯಾರಿದ್ದಾನೆ! ಆದರೆ, ಕಾಳಸಂತೆಕೋರರನ್ನು ತಡೆಯುವುದು ಸಾಧ್ಯವಿಲ್ಲವೇ? ಪೊಲೀಸರಿಗೆ ಗೊತ್ತಿದ್ದೂ ಸುಮ್ಮನಿದ್ದಾರೆಯೇ? ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಿಗೆ ಹೊರಗೇನು ನಡಯುತ್ತಿದೆ ಅಂತ ಗೊತ್ತಿಲ್ಲವೇ? ವೇಕ್ ಅಪ್ ಮೆನ್, ದಿಸ್ ಈಸ್ ಕ್ರಿಕೆಟ್, ನಾಟ್ ಗ್ಯಾಂಬ್ಲಿಂಗ್!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವರೇ, ನಾಳೆ ಮ್ಯಾಚ್ ಗೆಲ್ಸಪ್ಪಾ: ಆರ್ಸಿಬಿ ಅಭಿಮಾನಿಗಳಿಂದ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆ