ಬ್ಯೂಟಿ ಪ್ರದರ್ಶನಕ್ಕೆ ಸ್ಪಂದನಾ ಬಿಗ್ ಬಾಸ್ ಮನೆಗೆ ಬಂದಿದ್ದಾರೆ: ಕರಿಬಸಪ್ಪ ಟೀಕೆ
ಮೊದಲ ವಾರವೇ ಬಿಗ್ ಬಾಸ್ ಆಟದಿಂದ ಕರಿಬಸಪ್ಪ ಔಟ್. ಅವರ ಜೊತೆ ಆರ್ಜೆ ಅಮಿತ್ ಸಹ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳ ಬಗ್ಗೆ ಕರಿಬಸಪ್ಪ ಮಾತನಾಡಿದ್ದಾರೆ. ಟಿವಿ9 ಸಂದರ್ಶನದಲ್ಲಿ ಹಲವು ವಿಷಯಗಳನ್ನು ಅವರು ಈಗ ಹಂಚಿಕೊಂಡರು.
ಬಾಡಿ ಬಿಲ್ಡರ್ ಕರಿಬಸಪ್ಪ (Bodybuilder Karibasappa) ಅವರು ಮೊದಲ ವಾರವೇ ಬಿಗ್ ಬಾಸ್ ಆಟದಿಂದ ಔಟ್ ಆಗಿದ್ದಾರೆ. ಅವರ ಜೊತೆ ಇದ್ದ ಆರ್ಜೆ ಅಮಿತ್ ಕೂಡ ಎಲಿಮಿನೇಟ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಸ್ಪರ್ಧಿಗಳ ಬಗ್ಗೆ ಕರಿಬಸಪ್ಪ ಅವರು ಮಾತನಾಡಿದ್ದಾರೆ. ಟಿವಿ9 ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಮಾಳು ಅವರು ಉತ್ತರ ಕರ್ನಾಟಕದವರು. ಅವರು ಪರವಾಗಿಲ್ಲ, ಚೆನ್ನಾಗಿ ಆಡುತ್ತಿದ್ದಾರೆ. ಆದರೆ ಸ್ಪಂದನಾ (Spandana) ಏನೂ ಇಲ್ಲ. ಡ್ರೆಸ್ ಹಾಕಿಕೊಂಡು ಬ್ಯೂಟಿ ಪ್ರದರ್ಶನ ಮಾಡಲು ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ’ ಎಂದು ಕರಿಬಸಪ್ಪ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
