ಅದಾಗಲೇ ಕ್ರಿಸ್​ಮಸ್ ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ಬಾಲಿವುಡ್ ನಟ-ನಟಿಯರು, ಮನೆಗಳಲ್ಲಿ ಟ್ರೀ, ತಲೆಯ ಮೇಲೆ ಸಾಂಟಾನ ಟೋಪಿ!

ಚಂಕಿ ಪಾಂಡೆ ಮಗಳು ಮತ್ತು ಉದಯೋನ್ಮುಖ ತಾರೆ ಅನನ್ಯ ಪಾಂಡೆ ಮನೆಯಲ್ಲಿ ಕ್ರಿಸ್​ಮಸ್ ಟ್ರೀ ಇಟ್ಟು ಅದನ್ನು ಅಲಂಕರಿಸಿ ಸಂಭ್ರಮಿಸುತ್ತಿದ್ದಾರೆ. ಸಾರಾ ಅಲಿಖಾನ್, ಆಲಿಯಾ ಭಟ್, ಮತ್ತು ದಕ್ಷಿಣದ ನಟಿ ನಯನ್ ತಾರಾ ಅವರ ಮನೆಗಳಲ್ಲೂ ಮನಮೋಹಕ ಕ್ರಿಸ್​ಮಸ್​ ಟ್ರೀಗಳು.

TV9kannada Web Team

| Edited By: Arun Belly

Dec 22, 2021 | 1:44 AM

ಇನ್ನೆರಡು ದಿನ ಕಳೆದರೆ ಕ್ರಿಸ್​ಮಸ್ . ಜಗತ್ತಿನೆಲ್ಲಡೆ ಅತ್ಯಂತ ವಿಜೃಂಭಣೆ ಮತ್ತು ಸಡಗರ ಸಂಭ್ರಮಳಿಂದ ಆಚರಿಸಲ್ಪಡುವ ಹಬ್ಬ. ಸಿನಿಮಾ ನಟ ನಟಿಯರಿಗೆ ಈ ಹಬ್ಬವನ್ನು ಆಚರಿಸುವುದೆಂದರೆ ಬಲೇ ಖುಷಿ. ಕ್ರಿಸ್​ಮಸ್ ಧರ್ಮಾತೀತವಾಗಿ ಸಂಭ್ರಮಿಸುವ ಹಬ್ಬವೆಂದು ಬಾಲಿವುಡ್ ತಾರೆಯರು ಪ್ರತಿವರ್ಷ ಸಾಬೀತು ಮಾಡುತ್ತಾರೆ. ಬಿಗ್ ಬಿ ಮನೆಯಲ್ಲಿ ಕ್ರಿಸ್​ಮಸ್ ಸಡಗರ ಆಗಲೇ ಆರಂಭವಾಗಿ ಬಿಟ್ಟಿದೆ. ಸೋಮವಾರ ಜಾತಿ ನಿರ್ದೇಶನಾಲಯದ ಎದುರು ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಮನೆಯಲ್ಲಿ ಕೇಕ್ ಕತ್ತರಿಸುವ ತಯಾರಿ ನಡೆಸಿದ್ದಾರೆ.

ಚಂಕಿ ಪಾಂಡೆ ಮಗಳು ಮತ್ತು ಉದಯೋನ್ಮುಖ ತಾರೆ ಅನನ್ಯ ಪಾಂಡೆ ಮನೆಯಲ್ಲಿ ಕ್ರಿಸ್​ಮಸ್ ಟ್ರೀ ಇಟ್ಟು ಅದನ್ನು ಅಲಂಕರಿಸಿ ಸಂಭ್ರಮಿಸುತ್ತಿದ್ದಾರೆ. ಸಾರಾ ಅಲಿಖಾನ್, ಆಲಿಯಾ ಭಟ್, ಮತ್ತು ದಕ್ಷಿಣದ ನಟಿ ನಯನ್ ತಾರಾ ಅವರ ಮನೆಗಳಲ್ಲೂ ಮನಮೋಹಕ ಕ್ರಿಸ್​ಮಸ್​ ಟ್ರೀಗಳು.

ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಬೆಳೆಸಿದ ಗೆಳೆತನಕ್ಕೆ ದೊಡ್ಡ ಬೆಲೆ ತೆರಬೇಕಾಗಿ ಬಂದಿರುವ ಜಾಕ್ವೆಲಿನ್ ಫರ್ನಾಂಡೀಸ್, ಶಿಲ್ಪಾ ಶೆಟ್ಟಿ ಮತ್ತು ಅವರ ತಂಗಿ ಸಂತಾ ಕ್ಲಾಸ್ ಹೆಡ್ ಬ್ಯಾಂಡ್​ಗಳನ್ನು ಧರಿಸಿ ಕುಣಿದಾಡುತ್ತಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಮನೆಯಲ್ಲಿ ಒಂದು ಚಿಕ್ಕ ಕ್ರಿಸ್​ಮಸ್​ ಟ್ರೀ ಇಟ್ಟಿದ್ದಾರೆ. ಅನಿಲ್ ಕಪೂರ್ ಮಗಳು ಸೋನಿಯಾ ಕಪೂರ್ ಸಹ ಸಾಂಟಾ ಟೋಪಿ ಧರಿಸಿ ಟ್ರೀ ಮುಂದೆ ನಿಂತಿದ್ದಾರೆ.

ಶಿಲ್ಪಾಶೆಟ್ಟಿ, ತಮ್ಮ ಪತಿ ರಾಜ್ ಕುಂದ್ರಾ ಮತ್ತು ಮಗನೊಂದಿಗೆ ಕ್ರಿಸ್​ಮಸ್ ಟ್ರೀ ಮುಂದೆ ನಿಂತು ಕೆಮೆರಾಗೆ ಪೋಸ್ ನೀಡಿದ್ದಾರೆ. ಕೆಲವರು ಸಾಂಟಾನ ಟೋಪಿಗಳನ್ನು ಧರಿಸಿ ಸಂಭ್ರಮ ಪಡುತ್ತಿದ್ದಾರೆ. ಅವರಲ್ಲಿ ಜಾಹ್ನವಿ ಕಪೂರ್, ಸನ್ನಿ ಲಿಯೋನಿ, ಬಿಪಾಶಾ ಬಸು ಮೊದಲಾದವರು ಸೇರಿದ್ದಾರೆ.

ಇದನ್ನೂ ಓದಿ:   ‘ನ್ಯಾಷನಲ್​ ಕ್ರಶ್​ ಅಂದಿದ್ದು ಯಾರು? ಬರೀ ಓವರ್​ ಆ್ಯಕ್ಟಿಂಗ್​’; ರಶ್ಮಿಕಾ ವಿಡಿಯೋಗೆ ನೆಗೆಟಿವ್​ ಕಮೆಂಟ್​ಗಳ ಸುರಿಮಳೆ

Follow us on

Click on your DTH Provider to Add TV9 Kannada