ಕೃಷ್ಣರಾಜ್ ಒಡೆಯರ್ ಮತ್ತು ಸಿದ್ದರಾಮಯ್ಯ ಇಬ್ಬರೂ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಎಂಬಿ ಪಾಟೀಲ್

Updated on: Jul 26, 2025 | 8:31 PM

ನಾಲ್ವಡಿ ಕೃಷ್ಣರಾಜ್ ಒಡೆಯರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಕನ್ನಂಬಾಡಿ ಆಣೆಕಟ್ಟು ಕಟ್ಟಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಒಡೆಯರ್ ಅವರ ಸೇವೆ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿತ್ತು, ಆದರೆ ಸಿದ್ದರಾಮಯ್ಯ ಇಡೀ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ, ಅನ್ನಭಾಗ್ಯ, ಕ್ಷೀರಭಾಗ್ಯಗಳಲ್ಲದೆ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನರಿಗೆ ನೆರವಾಗಿದ್ದಾರೆ ಎಂದು ಪಾಟೀಲ್ ಹೇಳಿದರು.

ವಿಜಯಪುರ, ಜುಲೈ 26: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಎಂಬಿ ಪಾಟೀಲ್ ಎಐಸಿಸಿ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಕರ್ನಾಟಕಕ್ಕೆ ಭೇಟಿ ನೀಡಿದ ಸಮಯದಲ್ಲಿ ಕೇವಲ ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳನ್ನು ಭೇಟಿಯಾಗಿದ್ದಾರೆ, ಅಧಿಕಾರಿಗಳನ್ನು ಅವರು ಭೇಟಿಯಾಗಿಲ್ಲ ಎಂದರು. ಬಿಜೆಪಿಯ ಉಸ್ತುವಾರಿಗಳು ಸಹ ಕರ್ನಾಟಕ ಬರುತ್ತಿರುತ್ತಾರೆ ಮತ್ತು ಅವರ ಸಂಸದ ಮತ್ತು ಶಾಸಕರನ್ನು ಭೇಟಿಯಾಗುತ್ತಾರೆ. ಯಾಕೆ ಭೇಟಿಯಾದರು ಅಂತ ಯಾರಾದರೂ ಕೇಳಿದ್ದಾರಾ? ಅಂತ ಪಾಟೀಲ್ ಪ್ರಶ್ನಿಸಿದರು. ಬಿಹಾರ್ ಚುನಾವಣೆಗೆ ಹಣ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಹೇಳಲು ಸುರ್ಜೇವಾಲಾ ಬಂದಿದ್ದರು ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ ಅಂದಾಗ, ಅವರು ಹೇಳಿದಕ್ಕೆಲ್ಲ ಪ್ರತಿಕ್ರಿಯೆ ನೀಡಲ್ಲ, ಅವರೇನಾದರೂ ದುಡ್ಡು ಕೊಟ್ಟಿದ್ದಾರಂತಾ? ಎಂದು ಪಾಟೀಲ್ ಕೇಳಿದರು.

ಇದನ್ನೂ ಓದಿ:  ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಡಿಕೆ ಶಿವಕುಮಾರ್ ಮನೆ ಕದ ತಟ್ಟಿದ ಎಂಬಿ ಪಾಟೀಲ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ