ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಆದ್ರೆ ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್

Updated By: ಮದನ್​ ಕುಮಾರ್​

Updated on: Sep 05, 2025 | 9:01 PM

ಹಿರಿಯ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ‘ಜಂಬೂ ಸರ್ಕಸ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಟಿವಿ9 ಜೊತೆ ಮಾತನಾಡಿದರು. ದರ್ಶನ್ ಜೊತೆ ‘ಪೊರ್ಕಿ’, ‘ಬುಲ್ ಬುಲ್’, ‘ಒಡೆಯಾ’ ಸಿನಿಮಾಗಳನ್ನು ಎಂಡಿ ಶ್ರೀಧರ್ ಅವರು ಮಾಡಿದ್ದರು. ಇನ್ನೊಂದು ಸಿನಿಮಾ ಮಾಡುವ ಪ್ಲ್ಯಾನ್ ಕೂಡ ಶ್ರೀಧರ್ ಅವರಿಗೆ ಇತ್ತು.

ಹಿರಿಯ ನಿರ್ದೇಶಕ ಎಂ.ಡಿ. ಶ್ರೀಧರ್ (MD Sridhar) ಅವರು ‘ಜಂಬೂ ಸರ್ಕಸ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಟಿವಿ9 ಜೊತೆ ಮಾತನಾಡಿದರು. ದರ್ಶನ್ ಜೊತೆ ‘ಪೊರ್ಕಿ’, ‘ಬುಲ್ ಬುಲ್’, ‘ಒಡೆಯಾ’ ಸಿನಿಮಾಗಳನ್ನು ಎಂಡಿ ಶ್ರೀಧರ್ ಅವರು ಮಾಡಿದ್ದರು. ಇನ್ನೊಂದು ಸಿನಿಮಾ ಮಾಡುವ ಪ್ಲ್ಯಾನ್ ಕೂಡ ಶ್ರೀಧರ್ ಅವರಿಗೆ ಇತ್ತು. ಆದರೆ ಈಗ ದರ್ಶನ್ (Darshan Thoogudeepa) ಮೇಲೆ ಕೊಲೆ ಆರೋಪ ಇದೆ. ‘ನಾನು ಕಂಡಂತೆ ದರ್ಶನ್ ಆ ರೀತಿಯ ವ್ಯಕ್ತಿ ಅಲ್ಲ. ಯಾವ ಸಮಯದಲ್ಲಿ, ಯಾರಿಂದ ಈ ರೀತಿ ಆಯಿತೋ ನಮಗೆ ಗೊತ್ತಿಲ್ಲ. ಆ ರೀತಿ ಮಾಡುವ ಮನುಷ್ಯ ಅವರಲ್ಲ. ಹೀಗೆ ಆಗಬಾರದಾಗಿತ್ತು. ಕೋರ್ಟ್, ಪೊಲೀಸ್ ಅದನ್ನು ನೋಡಿಕೊಳ್ತಾರೆ. ಇಂದಲ್ಲ ನಾಳೆ ದರ್ಶನ್ ಹೊರಗೆ ಬಂದು ಸಿನಿಮಾ ಮಾಡ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದು ಎಂಡಿ ಶ್ರೀಧರ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.