Loading video

ಮಹಿಳಾ ಪೊಲೀಸ್ ಸಿಬ್ಬಂದಿ ಮಾತಾಡುತ್ತ ಅವರ ಮೊಬೈಲ್ ಫೋನನ್ನೇ ಲಪಟಾಯಿಸಿದ ಗದುಗಿನ ಕಳ್ಳ

|

Updated on: Mar 13, 2025 | 10:05 AM

ಕಳ್ಳತನದ ದೃಶ್ಯ ಸಿಸಿಟಿವಿಲ್ಲಿ ಸೆರೆಯಾಗಿರುವುದರಿಂದ ಕಳ್ಳನನ್ನು ಹಿಡಿದು ಮೊಬೈಲ್ ಫೋನ್ ವಶಪಡಿಸಿಕೊಳ್ಳುವುದು ಪೊಲೀಸರಿಗೆ ಕಷ್ಟವೇನೂ ಆಗಲಾರದು. ಆದರೆ, ಕಳ್ಳನ ಶಿಕ್ಷೆಯ ಪ್ರಮಾಣದಲ್ಲಿ ಹೆಚ್ಚಳವಾಗೋದು ನಿಶ್ಚಿತ. ಪೊಲೀಸ್ ಠಾಣೆಯಲ್ಲಿ ಕಳುವು ಮಾಡಿರುವುದಕ್ಕೆ ಪೊಲೀಸರಿಂದ ವಿಶೇಷ ಸತ್ಕಾರವೂ ಅವನಿಗೆ ಸಿಗಲಿದೆ! ಅದೇನೆ ಇರಲಿ, ಪೊಲೀಸಮ್ಮನ ಎದುರೇ ಅವರ ಫೋನ್ ಕದ್ದವ ಸಾಮಾನ್ಯ ಕಳ್ಳನಲ್ಲ.

ಗದಗ, ಮಾರ್ಚ್ 13: ಹುಟ್ಟುಗುಣ ಸುಟ್ಟರೂ ಹೋಗದೆಂಬ ಮಾತಿದೆ, ಆ ಮಾತಿನ ಸಜೀವ ಉದಾಹರಣೆ ಇಲ್ಲಿದೆ. ಗದಗಿನ ನಗರ ಪೊಲೀಸ್ ಠಾಣೆಯಲ್ಲಿ (Gadag town police station ) ನಡೆದಿರುವ ಘಟನೆ ಇದು. ಪ್ರಾಯಶಃ ಹಾಜರಿಗೆ ಅಂತ ಪೊಲೀಸ್ ಠಾಣೆಗೆ ಬಂದಿರುವ ಕಳ್ಳನೊಬ್ಬ ಮಹಿಳಾ ಸಿಬ್ಬಂದಿಯೊಂದಿಗೆ ಮಾತಾಡುತ್ತಾ ಅವರು ರಿಜಿಸ್ಟರ್ ಒಂದನ್ನು ನೋಡುವುದರಲ್ಲಿ ಮಗ್ನರಾದಾಗ ಟೇಬಲ್ ಮೇಲಿದ್ದ ಅವರ ಮೊಬೈಲ್ ಫೋನನ್ನು ಜೇಬಿಗಿಳಿಸಿ ಅಲ್ಲಿಂದ ಮರೆಯಾಗುತ್ತಾನೆ. ಕಳ್ಳನ ಕರಾಮತ್ತು ಠಾಣೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊಸಪೇಟೆಯ ಕಳ್ಳನೊಬ್ಬ ತನ್ನ ಕಸುಬುಗಿಳಿದಾಗ ವಿಚಿತ್ರ ಹಾವಭಾವ ಪ್ರದರ್ಶಿಸುತ್ತಾನೆ!

Published on: Mar 13, 2025 10:05 AM