ಕೊಲ್ಲೂರು ಮೂಕಾಂಬಿಕೆಯ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಅನಂತ್ ಅಂಬಾನಿ
ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದ ಗುರೂಜಿ ಜೊತೆ ಆಗಮಿಸಿದ್ದ ಅವರು, ಮೊದಲು ಕೊಲ್ಲೂರಿಗೆ ಭೇಟಿ ನೀಡಿದ್ದು, ಬಳಿಕ ಕೃಷ್ಣ ಮಠಕ್ಕೂ ತೆರಳಿ ದೇವರ ದರ್ಶನ ಪಡೆದಿದ್ದಾರೆ. ದೇಗುಲದ ವತಿಯಿಂದ ಅನಂತ್ ಅಂಬಾನಿ ಅವರನ್ನು ಸ್ವಾಗತಿಸಲಾಗಿದೆ.
ಉಡುಪಿ, ಜೂನ್ 15: ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬದ ಗುರೂಜಿ ಅವರೊಂದಿಗೆ ಆಗಮಿಸಿದ್ದ ಅವರು ಕೊಲ್ಲೂರು ಮೂಕಾಂಬಿಕೆಯ ದರ್ಶನದ ಬಳಿಕ ಉಡುಪಿ ಕೃಷ್ಣನನ್ನೂ ಕಣ್ತುಂಬಿಕೊಂಡಿದ್ದಾರೆ. ಉಡುಪಿ ಮಠದ ಆಡಳಿತ ಮಂಡಳಿಯು ಅನಂತ್ ಅಂಬಾನಿ ಅವರನ್ನು ಸ್ವಾಗತಿಸಿದ್ದು, ಕೃಷ್ಣನ ದರ್ಶನದ ಬಳಿಕ ಪರ್ಯಾಯ ಶೀರೂರು ಮಠದ ಶ್ರೀಗಳನ್ನೂ ಅನಂತ್ ಭೇಟಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

