ವಾಲ್ಮೀಕಿ ಹಗರಣ; ಸಿಎಂ ಮತ್ತು ಡಿಸಿಎಂರಿಂದ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ: ವಿಜಯೇಂದ್ರ

ವಾಲ್ಮೀಕಿ ಹಗರಣ; ಸಿಎಂ ಮತ್ತು ಡಿಸಿಎಂರಿಂದ ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 17, 2024 | 7:50 PM

ಸಿದ್ದರಾಮಯ್ಯ ಅವರ ಪತ್ನಿಗೆ ಸೈಟು ಸಿಕ್ಕಿರೋದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅನ್ನೋದನ್ನು ಅಂಗೀಕರಿಸುವ ವಿಜಯೇಂದ್ರ, ಆಗ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯೂ ಅಗಿದ್ದ ಸಿದ್ದರಾಮಯ್ಯನವರಿಗೆ ತಮ್ಮ ಧರ್ಮಪತ್ನಿಗೆ ನ್ಯಾಯಯುತವಾಗಿ ನಿವೇಶನಗಳು ಎಲ್ಲಿ ಸಿಗಬೇಕು ಅನ್ನೋದು ಗೊತ್ತಿರಲಿಲ್ಲವೇ ಅಂತ ಪ್ರಶ್ನಿಸುತ್ತಾರೆ.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಡಿಸಿಎಂ ಅರೋಪಗಳಿಗೆ ಕ್ಲೀನ್ ಚಿಟ್ ನೀಡಿದರೆ, ಮುಖ್ಯಮಂತ್ರಿಯವರು ಹಗರಣ ನಡೆದಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಅವರೇ ಹಣಕಾಸು ಸಚಿವರು ಕೂಡ ಆಗಿರುವುದರಿಂದ ಅವರ ಗಮನಕ್ಕೆ ಬಾರದೆ ಮತ್ತು ಅನುಮೋದನೆ ಇಲ್ಲದೆ ಹಣ ಬೇರೆ ರಾಜ್ಯಗಳಿಗೆ ಹೋಗುವುದು ಸಾಧ್ಯವೇ ಇಲ್ಲ ಎಂದು ವಿಜಯೇಂದ್ರ ಹೇಳಿದರು. ನಿಗಮದಲ್ಲಿ ಅವ್ಯವಹಾರ ನಡೆದಿರುವುದನ್ನು ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದು ಗಮನಕ್ಕೆ ತಾರದೆ ಹೋಗಿದ್ದರೆ ಪ್ರಕರಣ ಹಳ್ಳ ಹಿಡಿಯುತಿತ್ತು ಮತ್ತು ಆತ್ಮಹತ್ಯೆಗೆ ಶರಣಾದ ನಿಗಮದ ಅಧಿಕಾರಿ ಪಿ ಚಂದ್ರಶೇಖರನ್ ಅವರ ಡೆತ್ ನೋಟನ್ನು ಸಹ ಸರ್ಕಾರ ಮುಚ್ಚಿ ಹಾಕುತಿತ್ತು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈಡಿ ಇನ್ನೂ ಯಾರನ್ನೆಲ್ಲ ವಿಚಾರಣೆಗೆ ಗುರಿಮಾಡುತ್ತದೆಯೋ ಕಾದು ನೋಡೋಣ, ನಾವಂತೂ ಪ್ರಕರಣವನ್ನು ತಾರ್ಕಿಕ ಅಂತ್ಯ ಮುಟ್ಟಿಸುವವರೆಗೆ ಸುಮ್ಮನಿರಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ 14 ಸೈಟ್​ ನೀಡಲಾಗಿದೆ; ವಿಜಯೇಂದ್ರ ಆರೋಪ