ಬಿವೈ ವಿಜಯೇಂದ್ರ ಮತ್ತು ಯತೀಂದ್ರ ಸಿದ್ದರಾಮಯ್ಯರನ್ನು ಒಂದೇ ವೇದಿಕೆ ಮೇಲೆ ಅಕ್ಕಪಕ್ಕ ಕೂತಿರುವುದನ್ನು ನೋಡಿದ್ದೀರಾ?

|

Updated on: Jun 24, 2024 | 4:37 PM

ದೀಪ ಬೆಳಗುವಾಗ ಯತೀಂದ್ರ ಅವರು ವಿಜಯೇಂದ್ರರನ್ನು ಮುಂದೆ ಮಾಡುತ್ತಾರೆ, ಆದರೆ ವಿಜಯೇಂದ್ರ ಯತೀಂದ್ರ ಕೈ ಹಿಡಿದೇ ದೀಪ ಹೊತ್ತಿಸುತ್ತಾರೆ, ಅವರಿಬ್ಬರ ನಡುವೆ ಮಾತುಕತೆಯೂ ನಡೆಯುತ್ತದೆ. ಯತೀಂದ್ರ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಅಲ್ಲಿರೋದಿಲ್ಲ, ಯಾವುದೋ ಕೆಲಸದ ನಿಮಿತ್ತ ಬೇಗನೆ ಹೊರಟು ಬಿಡುತ್ತಾರೆ.

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಇಂದು ಒಂದೇ ವೇದಿಕೆ ಮೇಲೆ ಮತ್ತು ಅಕ್ಕಪಕ್ಕ ಕೂತಿದ್ದ ದೃಶ್ಯ ಮೈಸೂರಿನ ಆಲನಹಳ್ಳಿ ಕುದೇರುಮಠದಲ್ಲಿ (Kuderumath) ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ನೋಡಸಿಕ್ಕಿತು. ಹಲವಾರು ಮಠಾಧೀಶರ ಸಮ್ಮುಖದಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಯ ಮಕ್ಕಳು ಶುಭಾಷಯ ವಿನಿಮಯ ಮಾಡಿಕೊಂಡರು. ಕುದೇರುಮಠದ ವಿವಿಧ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಸಹ ಭಾಗಿಯಾಗಿದ್ದರು. ದೇವೇಗೌಡ ಮತ್ತು ಯತೀಂದ್ರ ನಡುವೆ ಅತ್ಮೀಯ ಬಾಂಧವ್ಯವಿದೆ ಯಾಕೆಂದರೆ ಸಿಎಂ ಸಿದ್ದರಾಮಯ್ಯ ಮತ್ತು ಗೌಡರು ಬಹಳ ಆಪ್ತ ಸ್ನೇಹಿತರು. ಹಾಗಾಗಿ ಚಿಕ್ಕಂದಿನಿಂದ ಯತೀಂದ್ರರನ್ನು ಜಿಟಿಡಿ ಬಲ್ಲರು. ದೀಪ ಬೆಳಗುವಾಗ ಯತೀಂದ್ರ ಅವರು ವಿಜಯೇಂದ್ರರನ್ನು ಮುಂದೆ ಮಾಡುತ್ತಾರೆ, ಆದರೆ ವಿಜಯೇಂದ್ರ ಯತೀಂದ್ರ ಕೈ ಹಿಡಿದೇ ದೀಪ ಹೊತ್ತಿಸುತ್ತಾರೆ, ಅವರಿಬ್ಬರ ನಡುವೆ ಮಾತುಕತೆಯೂ ನಡೆಯುತ್ತದೆ. ಯತೀಂದ್ರ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಅಲ್ಲಿರೋದಿಲ್ಲ, ಯಾವುದೋ ಕೆಲಸದ ನಿಮಿತ್ತ ಬೇಗನೆ ಹೊರಟು ಬಿಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೈಸೂರು ಸಂಸದ ಪ್ರತಾಪ್​ ಸಿಂಹಗೆ ಟಿಕೆಟ್​ ಮಿಸ್​?: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಚ್ಚರಿ ಹೇಳಿಕೆ

Published On - 7:16 pm, Sun, 23 June 24

Follow us on