ಸುಳ್ಳು ಹೇಳಿದ್ರೆ ರಿಸೈನ್: ಡಿಕೆ ಶಿವಕುಮಾರ್ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಡಿಸಿಎಂ ಡಿಕೆ ಶಿವಕುಮಾರ್ ಅವರು ಧರಿಸುವ 24 ಲಕ್ಷ ಮೌಲ್ಯದ ಕಾರ್ಟಿಯಾರ್ ವಾಚ್ (Cartier Watches) ಭಾರೀ ಸದ್ದು ಮಾಡುತ್ತಿದೆ. ಈ ವಾಚಿನ ವಿಚಾರವಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಮಾತಿನ ಸಮರ ಜೋರಾಗಿದ್ದು, ಲೋಕಾಯುಕ್ತಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಾಚ್ ಬಗ್ಗೆ ತಿಳಿಸಿದ್ದಾರಾ ಎಂದು ನಾರಾಯಣ ಪ್ರಶ್ನಿಸಿದ್ದಾರೆ.ಇದಕ್ಕೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು, (ಡಿಸೆಂಬರ್ 05): ಡಿಸಿಎಂ ಡಿಕೆ ಶಿವಕುಮಾರ್ ಅವರು ಧರಿಸುವ 24 ಲಕ್ಷ ಮೌಲ್ಯದ ಕಾರ್ಟಿಯಾರ್ ವಾಚ್ (Cartier Watches) ಭಾರೀ ಸದ್ದು ಮಾಡುತ್ತಿದೆ. ಈ ವಾಚಿನ ವಿಚಾರವಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಮಾತಿನ ಸಮರ ಜೋರಾಗಿದ್ದು, ಲೋಕಾಯುಕ್ತಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಾಚ್ ಬಗ್ಗೆ ತಿಳಿಸಿದ್ದಾರಾ ಎಂದು ನಾರಾಯಣ ಪ್ರಶ್ನಿಸಿದ್ದಾರೆ.ಇದಕ್ಕೆ ಕೆಂಡಾಮಂಡಲರಾಗಿರುವ ಡಿಕೆಶಿ, ಲೋಕಾಯುಕ್ತಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ವಾಚ್ ಬಗ್ಗೆ ಉಲ್ಲೇಖಿಸಿರುವೆ.ಅವರಿಗೆ ಏನ್ರಿ ಗೊತ್ತು? ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲಿ. ಇಡೀ ದೇಶದಲ್ಲಿ ಚರ್ಚೆಯಾಗಲಿ, ನಾನೇನು ತೋರಿಸಬೇಕಂತ ಏನಿಲ್ಲ. 2018, 2023ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಅಫಿಡವಿಟ್ ನೋಡಲಿ. ಅವರಿಗೆ ಕನಿಷ್ಠ ಸಾಮಾನ್ಯ ಜ್ಞಾನವಿರಬೇಕು. ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿಗೆ ಅನುಭವ ಇಲ್ಲ. ನಾನೇನಾದರೂ ಸುಳ್ಳು ಹೇಳಿದ್ರೆ ಈಗಲೇ ರಾಜೀನಾಮೆ ನೀಡುತ್ತೇನೆ. ಇಲ್ಲ ಅಂದ್ರೆ ಛಲವಾದಿ ನಾರಾಯಣಸ್ವಾಮಿ ರಾಜೀನಾಮೆ ನೀಡ್ತಾರಾ? ಎಂದು ಸವಾಲು ಹಾಕಿದರು.
