Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ

ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಅರ್ಚಕರ ತಂಡದಿಂದ ಪೂಜೆ

Gopal AS
| Updated By: Ganapathi Sharma

Updated on: Oct 17, 2024 | 7:16 AM

ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿ ಜಾತ್ರೆ ರಂಗೇರಿದ್ದು, ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಶಾಸಕ‌ ಎಎಸ್ ಪೊನ್ನಣ್ಣ ಕೂಡ ಭಾಗಮಂಡಲದಿಂದ‌ ಎಂಟು ಕಿಮೀ ಕಾಲ್ನಡಿಗೆಯಲ್ಲೇ ಭಕ್ತರ ಜತೆ ಬಂದಿದ್ದಾರೆ. ತಲಕಾವೇರಿಯಲ್ಲಿ ನಡೆಯುತ್ತಿರುವ ಪೂಜೆ, ವಿಧಿ ವಿಧಾನಗಳ ವಿಡಿಯೋ ಇಲ್ಲಿದೆ.

ಮಡಿಕೇರಿ, ಅಕ್ಟೋಬರ್ 17: ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಅರ್ಚಕರ ತಂಡದಿಂದ ಪೂಜೆ ಆರಂಭವಾಗಿದೆ. ತಲಕಾವೇರಿಯತ್ತ ಭಕ್ತಸಾಗರವೇ ಹರಿದು ಬಂದಿದೆ. ಭಾಗಮಂಡಲದಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಕಾವೇರಿ ಮಾತೆಯ ಸ್ವಾಗತಕ್ಕೆ ಕೊಡಗಿನ‌ಮೂಲ ನಿವಾಸಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಹೆಂಗೆಳೆಯರು ಆರತಿ ಎತ್ತಿ ಕಾವೇರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ