ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರವು ₹ 300 ಇಳಿಸಿ ಈಗ ₹ 50 ರಷ್ಟು ಮಾತ್ರ ಹೆಚ್ಚಿಸಿದೆ: ಸಿಟಿ ರವಿ
ರಾಜ್ಯ ಬಿಜೆಪಿಗೆ ಇದು ಕಪಾಳಮೋಕ್ಷ ಹೇಗಾಗುತ್ತದೆ ಮತ್ತು ಜನಾಕ್ರೋಶ ಯಾತ್ರೆಗೆ ಹಿನ್ನಡೆ ಯಾಕಾಗುತ್ತದೆ ಎಂದು ಪ್ರಶ್ನಿಸಿದ ರವಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀರು, ಹಾಲು ಮತ್ತು ಕಸದ ಮೇಲೂ ತೆರಿಗೆ ವಿಧಿಸುತ್ತಿದೆ, ರಾಜ್ಯದಲ್ಲಿ ಡೀಸೆಲ್ ಬೆಲೆಯನ್ನು ಅದು ₹ 5.93 ಏರಿಕೆ ಮಾಡಿದೆ, ಅಂಕಿ ಅಂಶಗಳು ಸತ್ಯವನ್ನು ಮರೆಮಮಾಚುವುದಿಲ್ಲ ಎಂದು ಹೇಳಿದರು.
ಮೈಸೂರು, ಏಪ್ರಿಲ್ 8: ರಾಜ್ಯ ಸರ್ಕಾರವು ತಾನು ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ಕೇಂದ್ರ ಸರ್ಕಾರ (Central Government) ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹ 50ಹೆಚ್ಚಿಸಿರುವುದರ ಜೊತೆ ಹೋಲಿಸಿ ತನ್ನ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದರು. ಅಂಕಿ ಅಂಶಗಳೊಂದಿಗೆ ಸತ್ಯವನ್ನು ಮನವರಿಕೆ ಮಾಡಿಕೊಳ್ಳುವ ಅವಶ್ಕತೆ ಎಲ್ಲರಿಗೂ ಇದೆ, ಆಗಸ್ಟ್ 2023 ರಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ₹ 300 ರಷ್ಟು ಕಡಿಮೆ ಮಾಡಿ ಈಗ ₹ 50 ಹೆಚ್ಚಿಸಿದೆ, ರಾಜ್ಯ ಸರ್ಕಾರವೂ ಸ್ಟ್ಯಾಂಪ್ ಡ್ಯೂಟಿಯನ್ನು ಶೇಕಡ 50ರಷ್ಟು ಕಡಿಮೆ ಮಾಡಿ ಶೇಕಡ 25 ರಷ್ಟು ಹೆಚ್ಚು ಮಾಡಲಿ, ಯಾರು ಬೇಡವೆನ್ನುತ್ತಾರೆ ಎಂದು ರವಿ ಹೇಳಿದರು.
ಇದನ್ನೂ ಓದಿ: LPG Cylinder Price: ದೇಶದ ಜನತೆಗೆ ಸಿಹಿ ಸುದ್ದಿ, ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ !
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ

ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
