ಸಂಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ದೇವರು ನನ್ನ ಕುಟುಂಬಕ್ಕೆ ಕೊಟ್ಟಿದ್ದಾನೆ: ಹೆಚ್ ಡಿ ರೇವಣ್ಣ, ಶಾಸಕ
ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾಡಿದ ಕಾಮೆಂಟ್ ಗಳಿಗೆ ವ್ಯಂಗ್ಯವಾಡಿದ ರೇವಣ್ಣ, ಅವರು ಬಹಳ ದೊಡ್ಡಮಟ್ಟದ ಲೀಡರ್, ಅವರ ಮಟ್ಟಕ್ಕೆ ತಾನು ಬೆಳೆದಿಲ್ಲ ಎಂದು ಹೇಳಿದರು. ಹಾಸನಕ್ಕೆ ತಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ, ಅಲ್ಲಿ 30 ವರ್ಷಗಳಿಂದ ಕೃಷಿ ಕಾಲೇಜೊಂದಿದೆ, ಅದನ್ನು ಉಳಿಸಿಕೊಳ್ಳಿ ಅಂತ ಕೇಳಿದ್ದೇನೆ ಎಂದು ರೇವಣ್ಣ ಹೇಳಿದರು.
ಮಂಡ್ಯ, ಏಪ್ರಿಲ್ 8: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ, ತನ್ನ ಕುಟುಂಬ ಯಾವುದೇ ಸಂಕಷ್ಟದಲ್ಲಿಲ್ಲ, ಏನೇ ಸಮಸ್ಯೆ ಎದುರಾದರೂ ಅದನ್ನು ರಾಜಕೀಯವಾಗಿ ಎದುರಿಸುವ ಶಕ್ತಿ (political will power) ತನ್ನ ಕುಟುಂಬಕ್ಕಿದೆ, ಸಂಕಷ್ಟಗಳಿಗೆಲ್ಲ ದೇವರಿಗೆ ಒಪ್ಪಿಸುತ್ತೇನೆ, ತಮ್ಮ ತಂದೆ ತಾಯಿ ಹಾಕಿದ ಕಣ್ಣೀರು ದೇವರಿಗೆ ಕಾಣಿಸುತ್ತದೆ, ಆತನೇ ಸಹಾಯ ಮಾಡುತ್ತಾನೆ ಎಂದು ಹೇಳಿದರು. ಕಾಲವಿನ್ನೂ ಒದಗಿ ಬಂದಿಲ, ಅದು ಬಂದಾಗ ಎಲ್ಲವನ್ನು ವಿವರಿಸಿ ಹೇಳುತ್ತೇನೆ ಎಂದು ರೇವಣ್ಣ ಹೇಳಿದರು.
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಹೇಳಿದ್ದನ್ನು ತಿಳಿಸಿದಾಗ ನಿಖಿಲ್ ದೊಡ್ಡಪ್ಪನ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದರು!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 08, 2025 11:48 AM
Latest Videos

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?

ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ

ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
