Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆ ಅಪಹರಣ ಕೇಸ್: ಭವಾನಿ ರೇವಣ್ಣಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್

ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆಯನ್ನು ಭವಾನಿ ರೇವಣ್ಣ ಅವರು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಇದೀಗ, ಈ ಷರತ್ತನ್ನು ಹೈಕೋರ್ಟ್​ ಸಡಿಲಿಸಿ, ಹೊಸ ಷರತ್ತನ್ನು ವಿಧಿಸಿದೆ. ಹಾಕಿದ್ದರೆ ಏನದು ಷರತ್ತು? ಹೊಸ ಷರತ್ತು ಏನು? ಇಲ್ಲಿದೆ ವಿವರ.

ಮಹಿಳೆ ಅಪಹರಣ ಕೇಸ್: ಭವಾನಿ ರೇವಣ್ಣಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್
ಭವಾನಿ ರೇವಣ್ಣ
Follow us
Ramesha M
| Updated By: ವಿವೇಕ ಬಿರಾದಾರ

Updated on: Apr 04, 2025 | 5:04 PM

ಮೈಸೂರು, ಏಪ್ರಿಲ್​ 04: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆ.ಆರ್.ನಗರದ (KR Nagar) ಸಂತ್ರಸ್ತೆಯನ್ನು ಅಪರಹರಿಸಿರುವ (Kidnap) ಆರೋಪ ಹೊತ್ತಿರುವ ಭವಾನಿ ರೇವಣ್ಣ (Bhavani Revanna) ಅವರು ಹಾಸನ (Hassan) ಮತ್ತು ಮೈಸೂರಿಗೆ (Mysore) ತೆರಳಲು ಹೈಕೋರ್ಟ್ (High Court)​ ಷರತ್ತುಬದ್ಧ ಅನುಮತಿ ನೀಡಿದೆ. ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆ ಪ್ರವೇಶಿಸದಂತೆ ವಿಧಿಸಿದ್ದ ಷರತ್ತು ವಿಧಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಇದೀಗ, ಹೈಕೋರ್ಟ್​ ಷರತ್ತನ್ನು ಸಡಿಲಿಸಿದ್ದು, ಹಾಸನ ಮತ್ತು ಮೈಸೂರು ಜಿಲ್ಲೆಗೆ ಪ್ರವೇಶಿಸಬಹುದು ಎಂದಿದೆ. ಆದರೆ, ಸಂತ್ರಸ್ತೆ ಮತ್ತು ಪ್ರಕರಣದ ಸಾಕ್ಷಿಗಳ ಮನೆಯ 500 ಮೀಟರ್ ಸುತ್ತಳತೆ ಪ್ರವೇಶಿಸುವಂತಿಲ್ಲ ಎಂದು ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಹೊಸ ಷರತ್ತು ವಿಧಿಸಿದೆ.

ಪ್ರಕರಣದ ಹಿನ್ನೆಲೆ

ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋದಲ್ಲಿ “ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ” ಎಂದು 2024ರ ಮೇ 2ರ ತಡರಾತ್ರಿ ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಹೆಚ್​ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗಾಗಿ ಭವಾನಿ ರೇವಣ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ 2024ರ ಜೂನ್​ 18 ರಂದು ಭವಾನಿ ರೇವಣ್ಣ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಭವಾನಿ ರೇವಣ್ಣ ಅವರು ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶಿಸದಂತೆ ಷರತ್ತು ವಿಧಿಸಿತ್ತು. ಇದೀಗ, ಹೈಕೋರ್ಟ್​ ಈ ಷರತ್ತನ್ನು ಸಡಿಲಿಸಿದೆ.​

ಇದನ್ನೂ ಓದಿ
Image
ಅಶ್ಲೀಲಕ್ಕೂ ಒಂದು ಮಿತಿ ಇರಬೇಕ: ಪ್ರಜ್ವಲ್​ ರೇವಣ್ಣಗೆ ಹೈಕೋರ್ಟ್‌ ಚಾಟಿ
Image
4ನೇ ಪ್ರಕರಣದಲ್ಲೂ ಸಹ ಪ್ರಜ್ವಲ್ ರೇವಣ್ಣ ಸಿಗಲಿಲ್ಲ ರಿಲೀಫ್
Image
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲೇ ಗತಿ, ಜಾಮೀನು ಅರ್ಜಿ ವಜಾ
Image
ಪ್ರಜ್ವಲ್​ ಅತ್ಯಾಚಾರ ಎಸಗಿರುವುದು ನಿಜ, ವಿಡಿಯೋಗಳೆಲ್ಲವೂ ಅಸಲಿ: SIT

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್!

ಏನಿದು ಪ್ರಜ್ವಲ್​ ರೇವಣ್ಣ ಪ್ರಕರಣ

ಕಳೆದ ವರ್ಷ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್​ಡ್ರೈವ್​ಗಳನ್ನು ಹಾಸನದಲ್ಲಿ ಹಂಚಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಕೆಲ ಅಶ್ಲೀಲ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಡಿಯೋಗಳಲ್ಲಿನ ಓರ್ವ ಮಹಿಳೆ, ನನ್ನ ಮೇಲೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಅತ್ಯಾಚಾರ ಪ್ರಕರಣದಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾಗಿದ್ದು, ಸದ್ಯ ಪ್ರಜ್ವಲ್​ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ