ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ

Edited By:

Updated on: Jan 13, 2025 | 5:43 PM

ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 11’ ಶೋನಿಂದ ಎಲಿಮಿನೇಟ್​ ಆಗಿದ್ದಾರೆ. ದೊಡ್ಮನೆಯೊಳಗೆ ಇದ್ದಾಗ ಚೈತ್ರಾ ಅವರು ಮದುವೆ ಬಗ್ಗೆ ಸುಳಿವು ನೀಡಿದ್ದರು. ಈಗ ಆ ವಿಚಾರದ ಬಗ್ಗೆ ಅವರು ಇನ್ನಷ್ಟು ವಿವರ ನೀಡಿದ್ದಾರೆ. ಟಿವಿ9 ಜೊತೆ ಚೈತ್ರಾ ಕುಂದಾಪುರ ಅವರ ಮಾತನಾಡಿದ್ದಾರೆ. ಬಿಗ್ ಬಾಸ್ ಆಟವನ್ನು ಮೆಲುಕು ಹಾಕಿದ್ದಾರೆ.

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ಮದುವೆ ನಿಶ್ಚಯ ಆಗಿದೆ. ‘ಮದುವೆ ಯಾವಾಗ ಎಂಬ ಬಗ್ಗೆ ಮನೆಯವರು ನಿರ್ಧಾರ ಮಾಡಬೇಕಿದೆ. ಮನೆಯವರ ಮಾತುಕಥೆ ನಡೆಯಬೇಕಿದೆ. ಯಾವಾಗಲೋ ಆಗಬೇಕಿತ್ತು. ಆದರೆ ಅದಕ್ಕೆ ಸಮಯ, ಸಂದರ್ಭ ಕೂಡಿ ಬರಬೇಕು ಎನ್ನುತ್ತಾರಲ್ಲ. ಒಂದು ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದೇವೆ. ಸಾಂಪ್ರದಾಯಿಕವಾಗಿ ಏನೆಲ್ಲ ನಡೆಯಬೇಕೋ ಅದೆಲ್ಲ ನಡೆದ ನಂತರ ಮದುವೆ ಬಗ್ಗೆ ಇನ್ನಷ್ಟು ಹೇಳುತ್ತೇನೆ’ ಎಂದಿದ್ದಾರೆ ಚೈತ್ರಾ ಕುಂದಾಪುರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.