ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ

Updated on: Mar 02, 2025 | 2:49 PM

ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅವರ 2ನೇ ಮದುವೆ ಅದ್ದೂರಿಯಾಗಿ ನೆರವೇರಿದೆ. ಮದುವೆ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಅವರ ಕಾಸ್ಟ್ಯೂಮ್​ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರ ನೀಡಿದರು. ಮುಂದಿನ ಪ್ಲ್ಯಾನ್ಸ್ ಯಾವ ರೀತಿ ಇದೆ ಎಂಬುದನ್ನು ಕೂಡ ಅವರು ವಿವರಿಸಿದರು.

ಉದ್ಯಮಿ ಜಗದೀಪ್ ಜೊತೆ ಚೈತ್ರಾ ವಾಸುದೇವನ್ (Chaitra Vasudevan) ಅವರು ಹಸೆಮಣೆ ಏರಿದ್ದಾರೆ. ಈ ಮದುವೆಯಲ್ಲಿ ಚೈತ್ರಾ ಧರಿಸಿದ ಸೀರೆಯ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ! ‘ಎಲ್ಲ ಕಾರ್ಯಕ್ರಮಕ್ಕೂ ಪ್ಲ್ಯಾನಿಂಗ್ ಬಹಳ ಮುಖ್ಯ. ಮೊದಲಿನಿಂದಲೂ ನಾನು ಭಿನ್ನವಾದ ಕಾಸ್ಟ್ಯೂಮ್ ಹಾಕುತ್ತೇನೆ. ಅದನ್ನು ಜನರು ಇಷ್ಟಪಟ್ಟು ಗುರುತಿಸುತ್ತಾರೆ. ಇದು ನನಗೆ ಸ್ಪೆಷಲ್ ದಿನ. ಹಾಗಾಗಿ ಸ್ಪೆಷಲ್ ಆಗಿ ರೆಡಿ ಆಗಿದ್ದೇನೆ. ನಿಮಗೆಲ್ಲ ಇಷ್ಟ ಆಗಿದೆ. ಅದೇ ನನಗೆ ಖುಷಿ’ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.