ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ ಹುಚ್ಚಾಟ!

Edited By:

Updated on: Aug 28, 2026 | 1:34 PM

ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಬಳಿ ಬೈಕ್ ಸವಾರರ ಆತಂಕಕಾರಿ ಹುಚ್ಚಾಟ ಬೆಳಕಿಗೆ ಬಂದಿದೆ. ಆಹಾರಕ್ಕಾಗಿ ಕಾಡಿನಿಂದ ರಸ್ತೆಗೆ ಬಂದಿದ್ದ ಒಂಟಿ ಸಲಗದ ತೀರ ಸಮೀಪ ಬೈಕ್ ನಿಲ್ಲಿಸಿ ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಸವಾರರು ನಡೆಸಿದ ಈ ಅಪಾಯಕಾರಿ ಸಾಹಸದ ಸಂಪೂರ್ಣ ವಿವರ ಮತ್ತು ವೀಡಿಯೊ ಇಲ್ಲಿದೆ.

ಚಾಮರಾಜನಗರ, ಆಗಸ್ಟ್ 28: ಆನೆಗಳ ಜೊತೆ ಸಾಹಸ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವ ಸಾರ್ವಜನಿಕರ ಹುಚ್ಚಾಟ ಮುಂದುವರಿದಿದೆ. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಒಂಟಿ ಸಲಗದ ಜೊತೆ ಬೈಕ್ ಸವಾರರು ಫೋಟೋ ಹಾಗೂ ಸೆಲ್ಫಿ ತೆಗೆಯಲು ಮುಂದಾದ ಆತಂಕಕಾರಿ ಘಟನೆ ನಡೆದಿದೆ. ಆಸನೂರು ಮಾರ್ಗದಲ್ಲಿ ಆಹಾರ, ಕಬ್ಬು ಹಾಗೂ ತರಕಾರಿ ಲಾರಿಗಳನ್ನು ಹುಡುಕಿಕೊಂಡು ಕಾಡಿನಿಂದ ರಸ್ತೆಗೆ ಆನೆಗಳು ಬರುತ್ತವೆ. ಈ ವೇಳೆ ಎದುರಾದ ಒಂಟಿ ಸಲಗವನ್ನು ಕಂಡು ಹೆದರುವ ಬದಲು, ಸವಾರರು ಆನೆಯ ಮುಂಭಾಗದಲ್ಲೇ ಬೈಕ್ ನಿಲ್ಲಿಸಿ ಫೋಟೋ ತೆಗೆಯಲು ಯತ್ನಿಸಿ ಅಪಾಯವನ್ನು ತಂದೊಡ್ಡಿಕೊಂಡಿದ್ದಾರೆ .

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More